ಏನಾಗೋದಿಲ್ಲ ಫುಲ್ ಕಾಫಿ ಕೊಡೋದಿಲ್ಲ. ಮಕ್ಕಳ ಇಡೀ ಲೋಟ ಹಾಲಿಗೆ ನಾವು ಕುಡಿವಾಗ ಸ್ವಲ್ಪ ಕಾಫಿ ಹಾಕಿ ಕೊಡ್ತೀವಷ್ಟೆ. ಇಷ್ಟಪಟ್ಟು ಕುಡೀತಾರೆ!
ನೀವು ಕೂಡ ಹೀಗೇ ಮಾಡ್ತೀರಾ? ಹಾಗಿದ್ರೆ ಗಮನ ಕೊಟ್ಟು ಓದಿ..
ಪ್ರತಿದಿನ ಒಂದೇ ಸಮಯದಲ್ಲಿ ಕಾಫಿ ಕುಡಿಯುವ ಅಭ್ಯಾಸ ಇರುವವರಿಗೆ ಇದು ಗೊತ್ತಿರುತ್ತದೆ. ಒಂದು ದಿನ ಕಾಫಿ ಸಿಗದೇ ಹೋದ್ರೆ ಏನೋ ಕಳೆದುಕೊಂಡ ಭಾವನೆ, ಕೆಲಸ ಮಾಡೋಕೆ ಮೂಡ್ ಇಲ್ಲ. ಕೆಫೀನ್ ಒಂದು ರೀತಿ ಅಡಿಕ್ಷನ್.
ಕಾಫಿ, ಟೀ. ಸೋಡಾ ಇದ್ಯಾವುದನ್ನೂ 12 ವರ್ಷಕ್ಕೂ ಕಡಿಮೆ ವಯಸ್ಸಾಗಿರುವ ಮಕ್ಕಳಿಗೆ ನೀಡುವಂತಿಲ್ಲ. ಕಾಫಿ ಕುಡಿತದಿಂದ ಮಕ್ಕಳಿಗೆ ನಾನಾ ಸಮಸ್ಯೆ ಎದುರಾಗುತ್ತದೆ. ಮಕ್ಕಳ ಬೆಳವಣಿಗೆಗೆ ನಿದ್ದೆ ಅತೀ ಮುಖ್ಯ. ಆದರೆ ಕಾಫಿ ಸೇವನೆಯಿಂದ ನಿದ್ದೆಯಲ್ಲಿ ಏರು ಪೇರಾಗುತ್ತದೆ. ಇದರಿಂದ ಬೆಳವಣಿಗೆ ಕುಂಠಿತವಾಗುತ್ತದೆ.
ಇನ್ನು ಕಾಫಿ ಅಡಿಕ್ಷನ್ ಒಮ್ಮೆ ಬಂದರೆ ತಪ್ಪಿಸೋಕೆ ಕಷ್ಟ, ಈಗಲೇ ಕಾಫಿ ಶುರು ಮಾಡಿದರೆ ಮುಂದೆ ದಿನಕ್ಕೆ ನಾಲ್ಕೈದು ಬಾರಿ ಕಾಫಿ ಕುಡಿಯೋ ಅಭ್ಯಾಸ ಮಾಡಿಕೊಳ್ತಾರೆ. ಮಕ್ಕಳೆದುರು ಕಾಫಿ ಕುಡಿಯೋದನ್ನು ನೀವೇ ಅವಾಯ್ಡ್ ಮಾಡಿ.