ಕೊರೆಯುವ ಚಳಿಗಾಲದಲ್ಲಿ ತಣ್ಣೀರ ಸ್ನಾನ ಅಸಾಧ್ಯ. ಬಿಸಿನೀರಿಗಾಗಿ ಹೀಟರ್ ಬಳಕೆ ಮಾಡುವ ಅಭ್ಯಾಸ ನಿಮಗಿದೆಯಾ? ಇದನ್ನು ಬಳಸುವಾಗ ಎಚ್ಚರ ಇರಲಿ. ಯಾವ ರೀತಿಯ ಹೀಟರ್ ಬೆಸ್ಟ್?
ರಾಡ್ ಹೀಟರ್ ಖರೀದಿಸುವಾಗ ISI ಗುರುತು ಹಾಗೂ ಬ್ರ್ಯಾಂಡೆಡ್ ಕಂಪನಿಗಳನ್ನು ಹೊಂದಿರುವವ ಹೀಟರ್ಗಳನ್ನು ಮಾತ್ರ ಖರೀದಿಸಿ. ಹೀಟರ್ ರಾಡ್ಗಳ ಮೇಲಿನ ಸಿಲಿಕಾ ಲೇಪನ ಎರಡು ವರ್ಷಗಳ ನಂತರ ಕಣ್ಮರೆಯಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿ.
ಕೆಲವರು ಹೀಟರ್ ಅನ್ನು ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಇಡುತ್ತಾರೆ. ಹಾಗೆ ಮಾಡುವಾಗ ಬಕೆಟ್ ಅನ್ನು ನೇರವಾಗಿ ಹೀಟರ್ ಹುಕ್‌ಗೆ ಜೋಡಿಸಬಾರದು. ಏಕೆಂದರೆ ಶಾಖವು ಪ್ಲಾಸ್ಟಿಕ್ ಅನ್ನು ಕರಗಿಸುತ್ತದೆ. ಇದು ಅಪಾಯಕಾರಿ. ಆದ್ದರಿಂದ ನೀವು ಹೀಟರ್ ಅನ್ನು ಪ್ಲಾಸ್ಟಿಕ್ ಬಕೆಟ್‌ನಲ್ಲಿ ಇಡಲು ಬಯಸಿದರೆ, ಅದರ ಮೇಲೆ ಅಡ್ಡಲಾಗಿ ತೆಳುವಾದ ಮರದ ತುಂಡನ್ನು ಬಳಸುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.
ನಿಮ್ಮಲ್ಲಿ ಅಲ್ಯೂಮಿನಿಯಂ ಬಕೆಟ್ ಇದ್ದರೆ, ನೀವು ಹೀಟರ್ ಅನ್ನು ನೇರವಾಗಿ ಅದರಲ್ಲಿ ಹಾಕಬಹುದು. ಕಬ್ಬಿಣದ ಬಕೆಟ್ ಅನ್ನು ಬಳಸದಿರುವುದು ಉತ್ತಮ. ಇದರ ಪರಿಣಾಮವಾಗಿ ವಿದ್ಯುತ್ ಆಘಾತದ ಅಪಾಯ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು ಹೇಳುತ್ತಾರೆ.
ನೀರಿನ ಮಟ್ಟವನ್ನು ಅವಲಂಬಿಸಿ, ಬಕೆಟ್ ಸಂಪೂರ್ಣವಾಗಿ ತುಂಬಿದ ನಂತರ, ಹೀಟರ್ ಅನ್ನು ನೀರಿನಲ್ಲಿ ಇಡಬೇಕು. ಹೀಟರ್ ಕ್ವಾಯಿಲ್ ಅನ್ನು ಸಂಪೂರ್ಣವಾಗಿ ಮುಳುಗಿಸಲು ಕಾಳಜಿ ವಹಿಸಿ. ನಂತರ ಮಾತ್ರ ಪ್ಲಗ್ ಅನ್ನು ಸಾಕೆಟ್‌ಗೆ ಹಾಕಬೇಕು ಹಾಗೂ ಆನ್ ಮಾಡಬೇಕು. ಬಕೆಟ್‌ನಲ್ಲಿರುವ ನೀರು ಶೇಕಡಾ 90ಕ್ಕಿಂತ ಹೆಚ್ಚು ಇರಬೇಕು.
ವಾಟರ್ ಹೀಟರ್ ಅನ್ನು ನೀರಿನಲ್ಲಿ ಎಷ್ಟು ದೂರ ಮುಳುಗಿಸಬೇಕು ಎಂಬುದನ್ನು ಸೂಚಿಸುವ ಗುರುತು ಇದೆ. ನೀರು ಆ ಗುರುತಿನವರೆಗೆ ಇದೆ ಎಂದು ಖಚಿತಪಡಿಸಿಕೊಳ್ಳಿ. ಬಳಿಕ ಸ್ವಿಚ್ ಆನ್ ಮಾಡುವುದು ಒಳ್ಳೆಯದು.

