ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನ ಯುಗದಲ್ಲಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ವೈಯಕ್ತಿಕ ಸಾಲ ಪಡೆಯುವುದು ಸುಲಭವಾದರೂ, ಕೆಲವು ಮಹತ್ವದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ತಪ್ಪು ಮಾಹಿತಿ ಅಥವಾ ತೀರ್ಮಾನಗಳು ನಿಮ್ಮ ಸಾಲ ಮಂಜೂರಾತಿಯನ್ನು ತಡಗೊಳಿಸಬಹುದು ಅಥವಾ ಬಡ್ಡಿದರ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ, ತಕ್ಷಣದ ಸಾಲವನ್ನು ಸಿಗಲು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಇಲ್ಲಿ ತಿಳಿಸಿಕೊಳ್ಳೋಣ.
ಸಾಲ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಬ್ಯಾಂಕಿಗೆ ಹೋಗುವ ಬದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಬ್ಯಾಂಕಿನ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಬಳಸಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಕುಟುಂಬದ ಸದಸ್ಯರೊಂದಿಗೆ ಜಂಟಿಯಾಗಿ ಅರ್ಜಿ ಸಲ್ಲಿಸಿ. ಉದಾಹರಣೆಗೆ, ನಿಮ್ಮ CIBIL ಸ್ಕೋರ್ ಕಡಿಮೆಯಿದ್ದರೆ, ಉತ್ತಮ CIBIL ಸ್ಕೋರ್ ಹೊಂದಿರುವ ಯಾರೊಂದಿಗಾದರೂ ಜಂಟಿಯಾಗಿ ಅರ್ಜಿ ಸಲ್ಲಿಸುವುದು ಉತ್ತಮ.
ಉತ್ತಮ CIBIL ಸ್ಕೋರ್ ಅನ್ನು ಕಾಯ್ದುಕೊಳ್ಳಿ. ಸಮಯಕ್ಕೆ ಸರಿಯಾಗಿ ಮರುಪಾವತಿಸುವ ಮೂಲಕ ನಿಮ್ಮ CIBIL ಸ್ಕೋರ್ ಅನ್ನು ಕಾಪಾಡಿಕೊಳ್ಳಬಹುದು.
ನಿಮಗೆ ಬಾಡಿಗೆ ಆದಾಯ ಅಥವಾ ಇತರ ಹೆಚ್ಚುವರಿ ಆದಾಯವಿದ್ದರೆ, ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಅದನ್ನು ಉಲ್ಲೇಖಿಸಿ. ಇದು ಸಾಲಕ್ಕೆ ಅನುಮೋದನೆ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಒಂದೇ ಸಮಯದಲ್ಲಿ ಹಲವು ಬ್ಯಾಂಕುಗಳಿಂದ ಸಾಲಕ್ಕೆ ಅರ್ಜಿ ಸಲ್ಲಿಸಬೇಡಿ. ಇದು ನಿಮ್ಮ CIBIL ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಅಲ್ಪಾವಧಿಯ ಸಾಲವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಇದು ನಿಮ್ಮ ಸಾಲವನ್ನು ತ್ವರಿತವಾಗಿ ಮರುಪಾವತಿಸಲು ಸಹಾಯ ಮಾಡುತ್ತದೆ.
ನೀವು ಈಗಾಗಲೇ ಖಾತೆ ಹೊಂದಿರುವ ಬ್ಯಾಂಕಿನಲ್ಲಿ ಸಾಲ ಪಡೆಯಲು ಪ್ರಯತ್ನಿಸಿ. ನಿಮ್ಮ ಹಿಂದಿನ ವಹಿವಾಟುಗಳು ಉತ್ತಮವಾಗಿದ್ದರೆ, ಸಾಲವು ಬೇಗನೆ ಅನುಮೋದನೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.