ನಿಮ್ಮ ಮನಸ್ಸು ಹ್ಯಾಪಿ ಆಗಿರ್ಬೇಕಾ? ಹಾಗಾದ್ರೆ ಈ ಟಿಪ್ಸ್ ಗಳನ್ನ ಫಾಲೋ ಮಾಡಿ

ಮನಸ್ಸು ಸಂತೋಷವಾಗಿರುವುದು ಜೀವನದ ಪ್ರಮುಖ ಅಂಶ. ಬೆಳಗ್ಗೆ ಎದ್ದೇಳುತ್ತಿದಂತೆ ಅಯ್ಯೋ ಇವತ್ತು ಯಾಕಾದ್ರೂ ಬೆಳಗಾಯಿತೋ ಅಂತ ನಿಮ್ಮ ಮನಸ್ಸು ಕೂಡ ಯೋಚನೆ ಮಾಡ್ತಿದೆಯಾ? ಈ ಯೋಚನೆಯಿಂದ ಹೊರ ಬರಬೇಕು ಅಂದ್ರೆ ಶಾರೀರಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವನ್ನು ಕೂಡ ನಾವು ಚನ್ನಾಗೇ ನೋಡಿಕೊಳ್ಳಬೇಕಾಗುತ್ತದೆ.

ನಿಮ್ಮ ಮನಸ್ಸನ್ನು ಖುಷಿಯಲ್ಲಿಟ್ಟುಕೊಳ್ಳಲು ಕೆಲವು ಉಪಾಯಗಳನ್ನ ನಾವು ಇವತ್ತು ನೋಡೋಣ.

ಪಾಸಿಟಿವ್ ಚಿಂತನೆ
ಪ್ರತಿ ಟೈಮ್ ನಲ್ಲೂ ಒಳ್ಳೆಯ ಅಂಶಗಳನ್ನ ಗಮನಿಸುವ ಅಭ್ಯಾಸ ಮಾಡಬೇಕು. ಸಮಸ್ಯೆಗಳೆಲ್ಲವೂ ತಾತ್ಕಾಲಿಕ ಎಂದು ಒಪ್ಪಿಕೊಂಡು, ಒಳ್ಳೆಯ ದಾರಿಗೆ ಮನಸ್ಸನ್ನು ತಿರುಗಿಸುವುದು ನಮ್ಮಲಿ ಪಾಸಿಟಿವ್ ಚಿಂತನೆಗೆ ದಾರಿ ಮಾಡಿಕೊಡುತ್ತದೆ.

ಮೆಡಿಟೇಶನ್ ಮತ್ತು ಯೋಗ
ಪ್ರತಿ ದಿನ ಕನಿಷ್ಠ 15 ರಿಂದ 20 ನಿಮಿಷ ಮೆಡಿಟೇಶನ್ ಅಥವಾ ಯೋಗ ಅಭ್ಯಾಸ ಮಾಡಿದರೆ, ಮನಸ್ಸು ಶಾಂತವಾಗಿರುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ.

ನಿಮ್ಮ ಹವ್ಯಾಸಗಳಿಗೆ ಸಮಯ ಕೊಡಿ
ಡ್ರಾಯಿಂಗ್, ಸಂಗೀತ, ಓದು, ಲೇಖನ, ಅಡುಗೆ, ಹೂಗಿಡ ಬೆಳೆಸುವುದು ಮುಂತಾದ ಹವ್ಯಾಸಗಳು ಮನಸ್ಸಿಗೆ ಶಾಂತಿ ನೀಡುವುದರಿಂದ ಮನಸ್ಸು ಸಂತೋಷವಾಗಿರುತ್ತದೆ.

ವ್ಯಾಯಾಮ ಮತ್ತು ನಡಿಗೆ
ಪ್ರತಿದಿನ ಕೆಲವು ನಿಮಿಷಗಳ ವಾಕಿಂಗ್, ಜಾಗಿಂಗ್, ಅಥವಾ ಯಾವುದೇ ತರಹದ ವ್ಯಾಯಾಮ ಮನಸ್ಸಿನ ತಾಜಾತನವನ್ನು ಹೆಚ್ಚಿಸುತ್ತದೆ.

ಉತ್ತಮ ಆಹಾರ ಸೇವನೆ ಮತ್ತು ನಿದ್ರೆ
ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ನಿದ್ದೆಯು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಹೀಗಾಗಿ ಆರೋಗ್ಯಕರ ಆಹಾರ ಸೇವನೆ ಮತ್ತು ಸರಿಯಾದ ನಿದ್ರೆ ಮಾನಸಿಕ ಸಮತೋಲನಕ್ಕೆ ಸಹಾಯ ಮಾಡುತ್ತದೆ.

ಹಾಸ್ಯ ಮತ್ತು ಹಾಸ್ಯಪ್ರಧಾನ ಚಲನಚಿತ್ರಗಳು
ದಿನನಿತ್ಯ ಕೆಲ ನಿಮಿಷ ಹಾಸ್ಯ ಕಾರ್ಯಕ್ರಮ ಅಥವಾ ಹಾಸ್ಯ ಚಲನಚಿತ್ರಗಳನ್ನು ನೋಡಿದರೆ, ಮನಸ್ಸಿಗೆ ತಣ್ಣನೆಯ ಅನುಭವ ಸಿಗುತ್ತದೆ.

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದು
ಪ್ರಿಯಜನರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವುದು ಮನಸ್ಸನ್ನು ಹಗುರಗೊಳಿಸುತ್ತದೆ. ಮುಖ್ಯವಾಗಿ ನಿಮ್ಮ ಕುಟುಂಬ, ಹೆತ್ತವರು, ಪತಿ ಪತ್ನಿ, ಮಕ್ಕಳೊಂದಿಗೆ ಒಂದು ದಿನದಲ್ಲಿ ಒಂದರ್ಧ ಗಂಟೆಯಾದರೂ ನಗು ನಗುತ್ತಾ ಮಾತನಾಡಿದರೆ ಅವ್ರು ಖುಷ್ ನೀವು ಖುಷ್ ಮತ್ತಿನ್ನೇನು ಬೇಕು ಆಲ್ವಾ .

ಜೀವನದಲ್ಲಿ ಏನೇ ಸಮಸ್ಯೆಗಳಿದ್ದರೂ, ನಮ್ಮ ಮನಸ್ಸನ್ನು ಸಂತೋಷದಲ್ಲಿಟ್ಟುಕೊಳ್ಳಲು ನಮ್ಮದೇ ಆದ ಸಣ್ಣ ಪ್ರಯತ್ನ ಬಹಳ ಮುಖ್ಯ. ಸಣ್ಣ-ಸಣ್ಣ ವಿಷಯಗಳಲ್ಲಿ ಸಂತೋಷ ಕಂಡುಕೊಳ್ಳುವುದೇ ಖುಷಿಯ ಜೀವನದ ಗುಟ್ಟು ಏನಂತೀರಾ?

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!