ನಗುವು ವ್ಯಕ್ತಿತ್ವದ ಶೋಭೆ. ಆದರೆ ನಗುವಿನೊಂದಿಗೆ ಹಲ್ಲುಗಳು ಹಳದಿಯಾಗಿ ಅಥವಾ ಹೊಳೆಯದಿದ್ರೆ, ಅದು ಆತ್ಮವಿಶ್ವಾಸದ ಕೊರತೆಗೆ ಕಾರಣವಾಗಬಹುದು. ಇದರ ಹಿಂದಿರುವ ಒಂದು ಮುಖ್ಯ ಕಾರಣವೆಂದರೆ ನಾವು ಬಳಸುವ ಟೂತ್‌ಬ್ರಷ್. ಅಂಗಡಿಗೆ ಹೋದಾಗ ಬಣ್ಣ ಬಣ್ಣದ ಬ್ರಷ್‌ಗಳು ನಮ್ಮ ಗಮನ ಸೆಳೆಯುತ್ತವೆ. ಆದರೆ, ಅತಿ ಕಠಿಣ ಬ್ರಷ್ ಆಯ್ಕೆ ಮಾಡುವುದು ನಿಮ್ಮ ಹಲ್ಲಿಗೆ ಬಹುಮಟ್ಟಿಗೆ ನಷ್ಟವನ್ನುಂಟುಮಾಡುತ್ತದೆ ಎಂಬುವುದು ಹಲವರಿಗೆ ತಿಳಿದೇ ಇಲ್ಲ.
ಹಾರ್ಡ್ ಬ್ರಷ್‌ನ ಅಪಾಯಗಳು:
ಹಾರ್ಡ್ ಬ್ರಷ್ ಬಳಸಿ ಬಲವಾಗಿ ಉಜ್ಜುವುದರಿಂದ ಹಲ್ಲುಗಳ ಮೇಲೆ ಇರುವ ಎನಾಮೆಲ್ ಎಂಬ ನೈಸರ್ಗಿಕ ರಕ್ಷಣಾ ಪದರ ಸವೆಯಲು ಶುರುವಾಗುತ್ತದೆ. ಈ ಎನಾಮೆಲ್ ಹೋದರೆ, ನಿಮ್ಮ ಹಲ್ಲುಗಳು ಬೇಗ ಹಳದಿಯಾಗುತ್ತವೆ, ಸವೆಯುತ್ತವೆ ಮತ್ತು ಬೇಗ ಹುಳುಕಾಗುತ್ತದೆ. ಅಲ್ಲದೆ, ಹಾರ್ಡ್ ಬ್ರಷ್‌ನಿಂದ ವಸಡಿನಲ್ಲಿ ರಕ್ತಸ್ರಾವವಾಗಬಹುದು. ಇದು ವಿಪರೀತವಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ವೈದ್ಯರು ಶಿಫಾರಸು ಮಾಡುವಂತೆ, Soft Bristles (ಮೃದುವಾದ ಕುಂಚಗಳು) ಇರುವ ಬ್ರಷ್ ಬಳಸಬೇಕು. ನೈಲಾನ್‌ನಿಂದ ತಯಾರಾದ ಮೃದುವಾದ ಬ್ರಷ್‌ಗಳು ಹಲ್ಲುಗಳನ್ನು ನಜೂಕಾಗಿ ಶುದ್ಧಗೊಳಿಸುತ್ತವೆ. ನಿಮ್ಮ ಎನಾಮೆಲ್ ಸುರಕ್ಷಿತವಾಗಿರುತ್ತದೆ ಮತ್ತು ವಸಡುಗಳು ಆರೋಗ್ಯವಾಗಿರುತ್ತವೆ.
ಅನುಸರಿಸಬೇಕಾದ ಟಿಪ್ಸ್:
ಬ್ರಷ್ ಮಾಡಿದ ನಂತರ ಬ್ರಷ್ ಅನ್ನು ಚೆನ್ನಾಗಿ ತೊಳೆಯಿರಿ. ಅದರಲ್ಲಿ ಯಾವುದೇ ಪೇಸ್ಟ್ ಉಳಿದುಕೊಳ್ಳದಂತೆ ಸ್ವಚ್ಛಗೊಳಿಸಿ. ಇದರಿಂದ ಮುಂದಿನ ಬಾರಿ ಬಳಸುವಾಗ ಬ್ಯಾಕ್ಟೀರಿಯಾಗಳು ಬಾಯಿಗೆ ಸೇರುವುದನ್ನು ತಡೆಯಬಹುದು.
ಪ್ರತಿ ಮೂರು ತಿಂಗಳಲ್ಲಿ ಬ್ರಷ್ ಬದಲಿಸಿ.
ಖರೀದಿಸುವಾಗ “Soft” ಎಂಬ ಟ್ಯಾಗ್ ನೋಡಿ ಖರೀದಿಸಿ.
ಹೀಗೆ ಸಣ್ಣ ಬದಲಾವಣೆಯಿಂದ ನಿಮ್ಮ ನಗುವನ್ನು ಮತ್ತೆ ಹೊಳೆಯುವಂತೆ ಮಾಡಬಹುದು. ನಿಮ್ಮ ನಗು ನಿಮ್ಮ ಶಕ್ತಿ, ಅದಕ್ಕೆ ಹಲ್ಲುಗಳ ಆರೈಕೆ ಬಹುಮುಖ್ಯ!