ನಾವು ನೋಡೀರ್ತ್ತೀವಿ ಹಲವರು ಸ್ಲಿಮ್ ಕಾಣೋಕೆ, ಶರ್ಟ್ ಫಿಟ್ ಆಗಿ ನಿಲ್ಲೋಕೆ ಟೈಟ್ ಆಗಿ ಬೆಲ್ಟ್ ಕಟ್ಟ್ಕೊತ್ತಾರೆ. ಆದ್ರೆ ಗೊತ್ತಾ, ಈ ರೀತಿ ಮಾಡೋದು ಆರೋಗ್ಯಕ್ಕೆ ಎಷ್ಟು ಸಮಸ್ಯೆ ತರಬಹುದು ಅಂತ. ಕೆಲವರಿಗೆ ಶಾಕ್ ಆಗ್ಬಹುದು. ಬೆಲ್ಟ್ ಅಂದ್ರೆ ಫ್ಯಾಷನ್ ಮಾತ್ರ ಅಲ್ಲ, ಅದು ಸರಿಯಾದ ರೀತಿಯಲ್ಲಿ ಧರಿಸಲೇ ಬೇಕು. ಇಲ್ಲ ಅಂದ್ರೆ ದೇಹವೇ ಹೇಳುತ್ತೆ ಸಾಕು ಸಾಕು ಅಂತ!
ಇವತ್ತಿನ ದಿನಗಳಲ್ಲಿ ಬೆಲ್ಟ್ ಹಾಕೋದು ಟ್ರೆಂಡ್ ಆಗಿದೆ. ಅದರಿಂದ ಆಗೋ 5 ಮುಖ್ಯ ದುಷ್ಪರಿಣಾಮಗಳ ಬಗ್ಗೆ ನಿಮಗೆ ಹೇಳ್ತಿವಿ ನೋಡಿ. Health first ಅನ್ನೋದು ಮರೆಯಬೇಡಿ!
ಆಹಾರ ಜೀರ್ಣಕ್ರಿಯೆ ಸಮಸ್ಯೆ
ಟೈಟ್ ಬೆಲ್ಟ್ ಹೊಟ್ಟೆಯ ಮೇಲ್ಮೈ ಮೇಲೆ ಒತ್ತಡ ಹೇರುತ್ತದೆ. ಇದರ ಪರಿಣಾಮವಾಗಿ ಆಹಾರ ಸರಿಯಾಗಿ ಜೀರ್ಣವಾಗದೇ ಇರೋದು, ಅಜೀರ್ಣ, ಗ್ಯಾಸ್ಟ್ರಿಕ್, ಆಸಿಡ್ ರಿಫ್ಲಕ್ಸ್ (ಅಮ್ಲದ ಉಬ್ಬಸ) ಉಂಟಾಗಬಹುದು.
ನರಗಳ ಮೇಲೆ ಒತ್ತಡ
ಟೈಟ್ ಬೆಲ್ಟ್ ಹಾಕಿ ಹೆಚ್ಚು ಸಮಯ ಕುಳಿತುಕೊಂಡರೆ, ಅದು ತೊಡೆ ಭಾಗ ಮತ್ತು ಸೊಂಟದ ಭಾಗದ ನರಗಳಿಗೆ ಒತ್ತಡ ನೀಡಬಹುದು. ಇದರಿಂದ ಸೊಂಟ ನೋವು ಅಥವಾ ಕಾಲು ನೋವು ಮತ್ತು numbness ಉಂಟಾಗಬಹುದು.
ಉಸಿರಾಟದಲ್ಲಿ ತೊಂದರೆ
ಹೆಚ್ಚು ಟೈಟ್ ಬೆಲ್ಟ್ ಹಾಕಿದರೆ, ಉಸಿರಾಡುವ ಕ್ಷಮತೆಯಲ್ಲಿ ಕೊರತೆ ಉಂಟಾಗಬಹುದು. ಶ್ವಾಸಕೋಶಗಳು ಸಂಪೂರ್ಣವಾಗಿ ವಿಸ್ತಾರಗೊಳ್ಳಲಾಗದೆ, ಶಕ್ತಿಯ ಕೊರತೆ ಅಥವಾ ಎದೆಯ ಒತ್ತಡ ಉಂಟಾಗಬಹುದು.
ರಕ್ತ ಚಲನೆಗೆ ಅಡ್ಡಿ
ಬೆಲ್ಟ್ ಬಹಳ ಟೈಟ್ ಆಗಿದ್ದರೆ, ಸೊಂಟದ ಭಾಗದಲ್ಲಿ ರಕ್ತದ ಹರಿವು ಸರಿಯಾಗಿ ನಡೆಯದು. ಇದರ ಪರಿಣಾಮವಾಗಿ ದೇಹದ ಇತರ ಭಾಗಗಳಿಗೆ ಆಮ್ಲಜನಕ ಸರಿಯಾಗಿ ಚಲನೆಯಾಗದೆ ಇರುವ ಅಪಾಯವಿದೆ.
ನಿಮ್ಮ ಆರೋಗ್ಯವೇ ಮೊದಲ ಪ್ರಾಮುಖ್ಯತೆ. ಫ್ಯಾಷನ್ಗಾಗಿ ನಿಮ್ಮ ದೇಹಕ್ಕೆ ಕಷ್ಟ ಕೊಡಬೇಡಿ. ದಿನವಿಡೀ ಟೈಟ್ ಬೆಲ್ಟ್ ಹಾಕುವುದನ್ನು ತಪ್ಪಿಸಿ, ಸಮಯೋಚಿತವಾಗಿ ಬೇಲ್ಟ್ ಹಾಕಿ ಮತ್ತು ಆರಾಮದಾಯಕ ಬಟ್ಟೆಗಳನ್ನು ಧರಿಸುವುದು ಉತ್ತಮ.