HEALTH | ಅತಿಯಾಗಿ ಚಿಂತೆ ಮಾಡ್ತೀರಾ? ಅದಕ್ಕೂ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಿ

ಅತಿಯಾದರೆ ಯಾವುದೂ ಕೂಡ ಒಳ್ಳೆಯದಲ್ಲ ಎನ್ನುವ ಬಗ್ಗೆ ನಿಮಗೆ ಗೊತ್ತೇ ಇದೆ ಅಲ್ವಾ? ಅತಿಯಾದ ಆಲೋಚನೆ ಕೂಡ ಮಾರಕ. ಓವರ್‌ ಥಿಂಕಿಂಗ್‌ ಮಾಡುವವರು ಇದನ್ನು ಮಿಸ್‌ ಮಾಡದೇ ಓದಿ..

ನಿಮ್ಮ ಮನಸ್ಸಿಗೆ ಬರುವ ಆಲೋಚನೆಗಳನ್ನು ಕಾಗದದಲ್ಲಿ ಬರೆಯಿರಿ. ಅತಿಯಾಗಿ ಯೋಚಿಸಲು ಕಾರಣಗಳನ್ನು ನೀವು ಮೊದಲು ಕಂಡುಹಿಡಿಯಬೇಕು. ನೀವು ಚಿಂತೆ ಮಾಡುತ್ತಿರುವ ಸಂಬಂಧಿತ ವಿಷಯಕ್ಕೆ 15-20 ನಿಮಿಷಗಳನ್ನು ಮೀಸಲಿಡಬೇಕು. ಆ ಸಮಯದ ನಂತರ, ಅದನ್ನು ಅಲ್ಲಿಯೇ ಬಿಟ್ಟು ನಿಮ್ಮ ಗಮನವನ್ನು ಬೇರೆ ವಿಷಯಕ್ಕೆ ಗಮನಹರಿಸಬೇಕು ಎಂದು ತಜ್ಞರು ತಿಳಿಸಿತ್ತಾರೆ.

ನಡೆಯುವುದು, ಸಂಗೀತ ಕೇಳುವುದು ಹಾಗೂ ನೀರಿನಿಂದ ಮುಖ ತೊಳೆಯುವುದು ಒತ್ತಡ ಕಡಿಮೆ ಮಾಡುತ್ತದೆ.

ಒಂದೇ ವಿಷಯದ ಬಗ್ಗೆ ಪದೇ ಪದೇ ಯೋಚಿಸುವುದು ವೃತ್ತದಲ್ಲಿ ಸುತ್ತಾಡುವಂತೆ ಆಗುತ್ತದೆ. ನೀವು ಸುತ್ತಾಡುವಾಗ ಎಲ್ಲಾ ಆಲೋಚನೆಗಳು ಆರಂಭಕ್ಕೆ ಹಿಂತಿರುಗುತ್ತವೆ. ನೀವು ಆ ವೃತ್ತದಿಂದ ಹೊರಬಂದು ಮುಂದುವರಿಯಲು ಪ್ರಯತ್ನಿಸಬೇಕು.

ಪ್ರಮುಖ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೊದಲು, ನೀವು 90:10 ಅನುಪಾತವನ್ನು ಅನುಸರಿಸಬೇಕು. ನೀವು 90 ಪ್ರತಿಶತ ಸ್ವಯಂ ವಿಶ್ಲೇಷಣೆಗೆ ಹಾಗೂ 10 ಪ್ರತಿಶತ ಇತರರ ಅಭಿಪ್ರಾಯಗಳಿಗೆ ಜಾಗರೂಕರಾಗಿರಬೇಕು.

ಅತಿಯಾಗಿ ಯೋಚಿಸುವ ಪ್ರವೃತ್ತಿಯನ್ನು ಹೊಂದಿರುವ ಜನರು ಇತರರು ಏನು ಹೇಳುತ್ತಾರೆಂದು ಹೆಚ್ಚಿನ ಮೌಲ್ಯವನ್ನು ನೀಡುತ್ತಾರೆ. ತಮ್ಮದೇ ಆದ ಆಲೋಚನೆಗಳನ್ನು ಪರಿಗಣಿಸುವುದಿಲ್ಲ, ಇದರಿಂದ ಅಂತಿಮವಾಗಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರದವರೇ ವಿಪರೀತ ಆಲೋಚನೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಏನಾದರೂ ಕೆಟ್ಟದು ಸಂಭವಿಸುತ್ತದೆ ಎಂಬ ಆಲೋಚನೆಗಳು ಅವರನ್ನು ಕಾಡುತ್ತವೆ, ಎಲ್ಲವೂ ಚೆನ್ನಾಗಿ ನಡೆಯುತ್ತದೆ ಎಂಬ ಸಕಾರಾತ್ಮಕ ಮನೋಭಾವವನ್ನು ಅವರು ಅಳವಡಿಸಿಕೊಂಡರೆ, ಆಲೋಚನೆಗಳ ತೀವ್ರತೆ ಕಡಿಮೆಯಾಗುವ ಅವಕಾಶವಿದೆ.

ಹಿಂದೆ ನಡೆದ ವಿಷಯಗಳ ಬಗ್ಗೆ ಅಥವಾ ಭವಿಷ್ಯದಲ್ಲಿ ಏನಾಗಲಿದೆ ಎಂಬುದರ ಬಗ್ಗೆ ಹೆಚ್ಚು ಯೋಚಿಸದೇ, ವರ್ತಮಾನದ ಕ್ಷಣವನ್ನು ಆನಂದಿಸುವ ಮೂಲಕ ಮುಂದುವರಿಯಬೇಕು. ನಾಲ್ಕು ಜನರೊಂದಿಗೆ ಭೇಟಿಯಾಗುವುದು ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಒಂಟಿತನ ಕಡಿಮೆಯಾಗಲು ಸಹಾಯವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!