Friday, January 9, 2026

Snacks Series 27 | ಡೋನಟ್ ನೋಡಿ ಮಕ್ಕಳು ಬೇಕು ಅಂತ ಹಠ ಮಾಡ್ತಾರಾ? ಹಾಗಿದ್ರೆ ಮನೆಯಲ್ಲೇ ಮಾಡಿ ಹೆಲ್ದಿ ಸ್ಟೈಲ್ ನಲ್ಲಿ

ಡೋನಟ್ ನೋಡಿದ ತಕ್ಷಣ ಮಕ್ಕಳು “ನನಗೂ ಬೇಕು” ಅಂತ ಹಠ ಹಿಡಿಯೋದಂತು ಮನೆಮನೆ ಕಥೆ. ಅಂಗಡಿಯ ಡೋನಟ್‌ಗಳಲ್ಲಿ ಎಣ್ಣೆ, ರಿಫೈನ್ಡ್ ಸಕ್ಕರೆ ಜಾಸ್ತಿ ಅನ್ನೋದು ಗೊತ್ತಿದ್ರೂ, ಮಕ್ಕಳ ಆಸೆಗೆ ‘ನೋ’ ಅಂತ ಹೇಳೋದು ಕಷ್ಟವಾಗುತ್ತೆ. ಅಂಥ ಸಂದರ್ಭಗಳಲ್ಲಿ, ಅವರ ಆಸೆಯನ್ನೂ ತಣಿಸಿ ಆರೋಗ್ಯವನ್ನೂ ಕಾಪಾಡೋ ಬೆಸ್ಟ್ ಆಯ್ಕೆ ಅಂದ್ರೆ – ಮನೆಯಲ್ಲೇ ಹೆಲ್ದಿ ಸ್ಟೈಲ್ ಡೋನಟ್ ತಯಾರಿಸೋದು. ರೆಸಿಪಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಓಟ್ಸ್ ಪುಡಿ – 1 ಕಪ್
ಗೋಧಿಹಿಟ್ಟು – ½ ಕಪ್
ಬೆಲ್ಲದ ಪುಡಿ / ಜೇನು – ½ ಕಪ್
ಹಾಲು – ½ ಕಪ್
ಮೊಸರು – ¼ ಕಪ್
ಬೇಕಿಂಗ್ ಪೌಡರ್ – 1 ಟೀಸ್ಪೂನ್
ಬೇಕಿಂಗ್ ಸೋಡಾ – ½ ಟೀಸ್ಪೂನ್
ವೆನಿಲ್ಲಾ ಎಸೆನ್ಸ್ – ½ ಟೀಸ್ಪೂನ್
ಎಣ್ಣೆ / ಬೆಣ್ಣೆ – 2 ಟೇಬಲ್ ಸ್ಪೂನ್
ಉಪ್ಪು – ಚಿಟಿಕೆ

ತಯಾರಿಸುವ ವಿಧಾನ:

ಮೊದಲು ಓಟ್ಸ್ ಅನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಂಡು ಬಟ್ಟಲಿಗೆ ಹಾಕಿ. ಅದಕ್ಕೆ ಗೋಧಿಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತೊಂದು ಬಟ್ಟಲಿನಲ್ಲಿ ಬೆಲ್ಲದ ಪುಡಿ, ಮೊಸರು, ಹಾಲು, ಎಣ್ಣೆ ಹಾಗೂ ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಕಲೆಸಿ.

ಈ ದ್ರವ ಮಿಶ್ರಣವನ್ನು ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ ಮೃದುವಾದ ಬ್ಯಾಟರ್ ತಯಾರಿಸಿ. ಡೋನಟ್ ಮೊಲ್ಡ್‌ಗೆ ಸ್ವಲ್ಪ ಎಣ್ಣೆ ಹಚ್ಚಿ ಬ್ಯಾಟರ್ ಹಾಕಿ. 180 ಡಿಗ್ರಿ ಸೆಲ್ಸಿಯಸ್‌ನಲ್ಲಿ ಪ್ರಿಹೀಟ್ ಮಾಡಿದ ಓವನ್‌ನಲ್ಲಿ 15–20 ನಿಮಿಷ ಬೇಯಿಸಿ. ಓವನ್ ಇಲ್ಲದಿದ್ದರೆ ಕುಕ್ಕರ್‌ನಲ್ಲೂ ಬೇಯಿಸಬಹುದು. ನಂತರ ಬೇಕಿದ್ದರೆ ಮೇಲಿನಿಂದ ನಿಮಗೆ ಬೇಕಾದ ಟಾಪಿಂಗ್ಸ್ ಹಾಕಬಹುದು.

error: Content is protected !!