ನಟ ದರ್ಶನ್‌ ಆರೋಗ್ಯದಲ್ಲಿ ಏರುಪೇರು, ಬಳ್ಳಾರಿ ಜೈಲಿಗೆ ಬಂದ ವೈದ್ಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟ ದರ್ಶನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ತಪಾಸಣೆಗಾಗಿ ವೈದ್ಯರು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ.

ಸದ್ಯ ಜೈಲಿನಲ್ಲಿ ದರ್ಶನ್​ಗೆ ವೈದ್ಯರು ರೂಟಿನ್ ಚೆಕಪ್ ಮಾಡುತ್ತಿದ್ದಾರೆ. ಬಿಪಿ, ಶುಗರ್ ಸೇರಿದಂತೆ ಬೆನ್ನು ನೋವು ಇರುವ ಹಿನ್ನೆಲೆಯಲ್ಲಿ ತಪಾಸಣೆ ಮಾಡಲಾಗುತ್ತಿದೆ. ಚಾರ್ಜ್​​ಶೀಟ್ ಸಲ್ಲಿಕೆ ದಿನವೇ ದರ್ಶನ್​ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಚಾರ್ಜ್​​ಶೀಟ್ ಸಲ್ಲಿಕೆಯಾಗಿರೋ ಬೆನ್ನಲ್ಲೇ ದರ್ಶನ್​​ಗೆ ಟೆನ್ಷನ್ ಶುರುವಾಗಿ ಹೀಗೆ ಆಗಿದೆ ಎನ್ನಲಾಗಿದೆ, ಈ ಬಗ್ಗೆ ವೈದ್ಯರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!