ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ರೋಗವನ್ನು ಗುಣಪಡಿಸುವ ಶಕ್ತಿ ಒಬ್ಬ ವೈದ್ಯರಿಗಿದೆ..ಆದರೆ, ಚಿಕಿತ್ಸೆಯ ಸಮಯದಲ್ಲಿ ವೈದ್ಯರು ಮಾಡುವ ಯಡವಟ್ಟು ಅಮಾಯಕರ ಪ್ರಾಣವನ್ನು ಬಲಿಪಡೆಯುತ್ತವೆ ಇಂತಹದ್ದೇ ಘಟನೆ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ನಡೆದಿದೆ. ಗರ್ಭಿಣಿಗೆ ಆಪರೇಷನ್ ಮಾಡಿದ ವೈದ್ಯರು ಕತ್ತರಿಯನ್ನು ಹೊಟ್ಟೆಯೊಳಗೆ ಬಿಟ್ಟು ಹೊಲಿಗೆ ಹಾಕಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿವರಕ್ಕೆ ಹೋದರೆ.. ವಾರದ ಹಿಂದೆ ಗರ್ಭಿಣಿಯೊಬ್ಬರು ಹೆರಿಗೆಗಾಗಿ ಏಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಸಿಸೇರಿಯನ್ ಮಾಡಿ ಮಗು ಹೊರತೆಗೆದಿದ್ದಾರೆ. ಆಪರೇಷನ್ ಮುಗಿಸಿ ಹೊಲಿಗೆ ಹಾಕುವಾಗ ಹೊಟ್ಟೆಯಲ್ಲಿದ್ದ ಕತ್ತರಿ ತೆಗೆಯುವುದನ್ನೇ ಮರೆತಿದ್ದಾರೆ. ಡಿಸ್ಚಾರ್ಜ್ ಆದ ಬಳಿಕ ಸಂತ್ರಸ್ತೆ ಹೊಟ್ಟೆ ನೋವಿನಿಂದ ಕಂಗಾಲಾಗಿದ್ದರು. ಎಕ್ಸ್ ರೇ ತೆಗೆಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ.
ಹೊಟ್ಟೆಯಲ್ಲಿ ಕತ್ತರಿ ಇರುವುದು ಪತ್ತೆಯಾದ ಬಳಿಕ ಈ ಘಟನೆ ಹೊರಬೀಳದಂತೆ ವೈದ್ಯರು ಕಟ್ಟೆಚ್ಚರ ವಹಿಸಿದ್ದರು. ಆಸ್ಪತ್ರೆ ಸಿಬ್ಬಂದಿಯೊಬ್ಬರು ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ಎಕ್ಸ್ ರೇ ಫೋಟೋ ಹಾಕಿದಾಗ ಈ ವಿಷಯ ಹೊರಬಿದ್ದಿದೆ. ಆಸ್ಪತ್ರೆ ಆಡಳಿತ ಮಂಡಳಿ ಗಮನಕ್ಕೆ ಬರುತ್ತಿದ್ದಂತೆ ನೌಕರನನ್ನು ತರಾಟೆಗೆ ತೆಗೆದುಕೊಂಡು ಪೋಸ್ಟ್, ಎಲ್ಲಾ ಮಾಹಿತಿಯನ್ನು ಡಿಲೀಸ್ ಮಾಡಿಸಿದರೆಂದಬ ಆರೋಪ ಇದೀಗ ಕೇಳಿಬಂದಿದೆ. ಸಂತ್ರಸ್ತೆಯ ಕುಟುಂಬಸ್ಥರು ಹಾಗೂ ಸಂಬಂಧಿಕರು ವೈದ್ಯರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.