ಪ್ರತಿಷ್ಠಿತ ಜೈಪುರ ಚಲನಚಿತ್ರೋತ್ಸವಕ್ಕೆ ‘ಪುರ್ಸ ಕಟ್ಟುನ’ ಸಾಕ್ಷ್ಯಚಿತ್ರ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಾ. ಸುಂದರ ಕೇನಾಜೆ ಚಿತ್ರಕತೆ ನಿರ್ದೇಶನ, ಭರತೇಶ ಅಲಸಂಡೆಮಜಲು ಹಾಗೂ ಡಾ. ವಿಶ್ವನಾಥ ಬದಿಕಾನ ನಿರ್ಮಾಪಕರಾಗಿರುವ “ಪುರ್ಸ ಕಟ್ಟುನ, ಇನಿ- ಕೋಡೆ- ಎಲ್ಲೆ” ಸಾಕ್ಷ್ಯಚಿತ್ರ ಇನ್ನೊಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಈ ಬಾರಿ ಇದು ಜಗತ್ತಿನ ಅತ್ಯಂತ ದೊಡ್ಡ ಹಾಗೂ ಪ್ರತಿಷ್ಠಿತ ಜೈಪುರ ಚಲನಚಿತ್ರೋತ್ಸವಕ್ಕೆ ಅರ್ಹತೆ ಪಡೆದಿದೆ. ಭಾಗವಹಿಸಿದ 82 ದೇಶಗಳ 2971 ಸಿನಿಮಾ ಮತ್ತು ಸಾಕ್ಷ್ಯಚಿತ್ರಗಳಲ್ಲಿ 326 ರಲ್ಲಿ ಒಂದಾಗಿ ಆಯ್ಕೆಯಾದ ಇದು ಈ ಚಲನಚಿತ್ರೋತ್ಸವದ ಇತಿಹಾಸದಲ್ಲೇ ಅತೀ ಹೆಚ್ಚು ಭಾಗವಹಿದ ದಾಖಲೆಯಲ್ಲಿ ಅರ್ಹತೆ ಪಡೆದಿದೆ.

ಇದೇ ಫೆಬ್ರವರಿ 11ರಿಂದ 15 ವರೆಗೆ ಈ ಚಲನಚಿತ್ರೋತ್ಸವವು ರಾಜಸ್ಥಾನದ ಜೈಪುರದಲ್ಲಿ ನಡೆಯಲಿದ್ದು, ಜೈಪುರದ ನಾನಾ ಕಡೆ ಇದರ ಪ್ರದರ್ಶನ, ಚರ್ಚೆ, ಸಂವಾದಗಳೂ ನಡೆಯಲಿವೆ. ಜೈಪುರ ಸಾಹಿತ್ಯೋತ್ಸವದ ನಂತರ ಈ ಚಲನಚಿತ್ರೋತ್ಸವ ನಡೆಯಲಿದೆ.

ಈ ಸಾಕ್ಷ್ಯ ಚಿತ್ರವನ್ನು ವಿಕಿಮೀಡಿಯ ಪೌಂಢೇಶನ್, CIS A2K ಮತ್ತು ಕರಾವಳಿ ವಿಕಿಮೀಡಿಯನ್ ಯೂಸರ್ಸ್ ಗ್ರೂಪ್‌ನ ಸಹಕಾರದಿಂದ ತಯಾರಿಸಲಾಗಿ ಅಂತರಜಾಲಕ್ಕೆ ಬಿಡುಗಡೆ ಮಾಡಲಾಗಿದೆ. ಇದು ಈಗಾಗಲೇ ತ್ರಿಶೂರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಅರ್ಹತೆ ಪಡೆದು 5 ದಿನಗಳ ಕಾಲ ಪ್ರದರ್ಶನ, ಗೋಷ್ಠಿ, ಚರ್ಚೆಗಳಿಗೆ ಒಳಪಟ್ಟಿತ್ತು.

ಈ ಸುದ್ದಿಗೋಷ್ಠಿಗಳಲ್ಲಿ ನಿರ್ದೇಶಕರಾದ ಡಾ. ಸುಂದರ ಕೇನಾಜೆ ಭಾಗವಹಿಸಿ ವಿಚಾರ ಮಂಡಿಸಿದ್ದರು ಎಂದು ನಿರ್ಮಾಪಕ ಭರತೇಶ ಅಲಸಂಡೆಮಜಲು  ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!