ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಸೇನೆಯ ಚೆಕ್‍ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ನಾಲ್ವರು ಉಗ್ರರ ರೇಖಾಚಿತ್ರವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಹುಡುಕಿಕೊಟ್ಟವರಿಗೆ 20 ಲಕ್ಷರೂ. ಬಹುಮಾನ ಘೋಷಣೆ ಮಾಡಲಾಗಿದೆ. ಜಮ್ಮುವಿನಲ್ಲಿ ರಾತ್ರೋರಾತ್ರಿ ಆರಂಭವಾದ ಎರಡು ಎನ್‌ಕೌಂಟರ್‌ಗಳು ಬೆಳಗಿನ ವರೆಗೂ ನಡೆದಿತ್ತು. ಸೇನಾ ಪೋಸ್ಟ್‌ನ ಮೇಲಿನ ದಾಳಿಯಿಂದಾಗಿ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.