ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ವಿದ್ಯುತ್ ಬಿಲ್ ಏರಿಕೆ ಜನರನ್ನು ಹೈರಾಣಾಗಿಸಿದ್ದು, ಇದೀಗ ದೇವಸ್ಥಾನದ ವಿದ್ಯುತ್ ಬಿಲ್ (Electricity Bill) ಕಂಡು ಅಜ್ಜಿಯೊಬ್ಬರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಧಾರವಾಡದಲ್ಲಿ ಅಜ್ಜಿಯೊಬ್ಬರು ದೇವಸ್ಥಾನದ ವಿದ್ಯುತ್ ಬಿಲ್ ಕಂಡು ಆಕ್ರೋಶ ಹೊರಹಾಕಿದ್ದು,ದೇವರು ಅಡುಗೆ ಮಾಡುತ್ತಾ? ಫ್ರಿಡ್ಜ್ ಬಳಸುತ್ತಾ ಎಂದು ಗರಂ ಆಗಿದ್ದಾರೆ .
ಶಕ್ತಿ ಕಾಲೋನಿಯಲ್ಲಿರುವ ಈಶ್ವರ ದೇವಸ್ಥಾನದ (Temple) ವಿದ್ಯುತ್ ಬಿಲ್ ಹಿಂದೆದಿಗಿಂತ ಈ ತಿಂಗಳು ಜಾಸ್ತಿ ಬಂದಿದೆ. ಇದರಿಂದಾಗಿ ದೇವಸ್ಥಾನದಲ್ಲಿ ಅರ್ಚಕಿಯಾಗಿರುವ ಅನಸೂಯಾ ಮಠಪತಿ ಸಿಟ್ಟುಗೊಂಡಿದ್ದಾರೆ . ಪ್ರತಿ ತಿಂಗಳು 400 ರೂಪಾಯಿ ಬರುತ್ತಿತ್ತು. ಈ ತಿಂಗಳು 940 ರೂ. ಬಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರ ದೇವಸ್ಥಾನದ ವಿದ್ಯುತ್ ಬಿಲ್ ಪಾವತಿ ಮಾಡದಂತೆ ಆದೇಶ ಮಾಡಲಿ. ಈ ತಿಂಗಳು ಕರೆಂಟ್ ಬಿಲ್ ಕಟ್ಟೋದಿಲ್ಲ ಎಂದಿದ್ದಾರೆ.