ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಹದ ಆರೋಗ್ಯಕ್ಕೆ ವ್ಯಾಯಾಮ ತುಂಬಾ ಒಳ್ಳೆಯದು. ಒಬ್ಬ ವ್ಯಕ್ತಿಯು ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ವ್ಯಾಯಾಮ ಮಾಡಬೇಕು ಎಂದು ತಜ್ಞರು ಸೂಚಿಸುತ್ತಾರೆ. ಕೆಲವರಿಗೆ ವ್ಯಾಯಾಮ ಮಾಡುವುದರಿಂದ ತಲೆನೋವು ಉಂಟಾಗುತ್ತದೆ. ಹಾಗಾಗಿ ಕೆಲವರು ವ್ಯಾಯಾಮದಿಂದ ತಲೆನೋವು ಬರುತ್ತೆ ಎಂದು ವ್ಯಾಯಾಮ ಮಾಡೋದನ್ನು ನಿಲ್ಲಿಸುತ್ತಾರೆ. ವಾಸ್ತವ ಅಂದ್ರೆ ವ್ಯಾಯಾಮ ತಲೆನೋವಿಗೆ ಕಾರಣವಲ್ಲ.
ವ್ಯಾಯಾಮದ ನಂತರ ತಲೆನೋವಿಗೆ ಕಾರಣಗಳು
1. ವಿಪರೀತ ತಲೆನೋವು; ಇದು ಎಲ್ಲರಿಗೂ ಕಾಮನ್ ವ್ಯಾಯಾಮ ಮಾಡಿ ಸುಸ್ತಾದ್ದರಿಂದ ಈ ತಲೆನೋವು ಬರುತ್ತದೆ. ಇದಕ್ಕೆ ವಿಶ್ರಾಂತಿ ಪಡೆದರೆ ಸಾಕು.
2. ನಿರ್ಜಲೀಕರಣದ ತಲೆನೋವು; ವ್ಯಾಯಾಮದ ನಂತರ ದೇಹಕ್ಕೆ ಸಾಕಷ್ಟು ನೀರು ಸಿಗದಿರುವುದು ಈ ತಲೆನೋವಿಗೆ ಕಾರಣ. ಈ ವೇಳೆ ಬಾಯಾರಿಕೆ, ಗಾಢ ಹಳದಿ ಮೂತ್ರ, ಸಾಮಾನ್ಯಕ್ಕಿಂತ ಕಡಿಮೆ ಮೂತ್ರದ ಉತ್ಪಾದನೆ, ದಣಿವು ಮತ್ತು ಆಲಸ್ಯ, ತಲೆತಿರುಗುವಿಕೆ ಮತ್ತು ಕಿರಿಕಿರಿಯನ್ನು ಒಳಗೊಂಡಿರುತ್ತದೆ.
3. ಒತ್ತಡದ ತಲೆನೋವು; ಇದು ಮಾನಸಿಕ ಒತ್ತಡವಲ್ಲ, ದೈಹಿಕ ಒತ್ತಡದಿಂದ ಉಂಟಾಗುವ ತಲೆನೋವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
4. ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ; ವ್ಯಾಯಾಮದ ಮೊದಲು ಏನನ್ನೂ ತಿನ್ನದಿದ್ದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ಕುಸಿಯುವ ಸಾಧ್ಯತೆಯಿದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವುದರಿಂದ ಕ್ಯಾಲೋರಿಗಳ ಕೊರತೆಯಿಂದಾಗಿ ತಲೆನೋವು ಉಂಟಾಗುತ್ತದೆ.
5. ಮೈಗ್ರೇನ್; ಮೈಗ್ರೇನ್ ತಡೆಯಲು ವೈದ್ಯರ ಸಲಹೆ ಮೇರೆಗೆ ವ್ಯಾಯಾಮ ಮಾಡಬೇಕು. ಅತಿಯಾದ ವ್ಯಾಯಾಮವು ಕೆಲವರಲ್ಲಿ ಮೈಗ್ರೇನ್‌ಗೆ ಕಾರಣವಾಗಬಹುದು. ಇದು ವಾಂತಿ, ಆಯಾಸ, ವಾಕರಿಕೆ ಮತ್ತು ತಲೆನೋವುಗೆ ಕಾರಣವಾಗುತ್ತದೆ.