ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಜಾನ್ವಿ ಕಪೂರ್ ಸದ್ಯ ಬಾಲಿವುಡ್‌ನ ಹ್ಯಾಪೆನಿಂಗ್ ಹೀರೋಯಿನ್, ಆಕೆಯ ಪಾಲಿಗೆ ಸಾಕಷ್ಟು ಆಫರ್‌ಗಳು ಒಲಿದುಬಂದಿವೆ.
ಅದರ ಜೊತೆಗೆ ಜಾನ್ವಿ ಬೇರೆ ವಿಷಯಗಳಲ್ಲಿಯೂ ಸುದ್ದಿಯಾಗುತ್ತಾರೆ. ಜಾನ್ವಿ ಜಿಮ್ ಹೋಗುವಾಗ ಫೋಟೊ ತೆಗೆಯಬೇಡಿ ಎಂದು ಪ್ಯಾಪರಾಜಿಗಳಿಗೆ ಮನವಿ ಮಾಡಿದ್ದಾರೆ.
ಜಿಮ್‌ಗೆ ಹೋಗೋಕೂ ಸ್ವಾತಂತ್ರ್ಯ ಇಲ್ವಾ? ನಮ್ಮಿಷ್ಟದ ಬಟ್ಟೆ ಹಾಕಿಕೊಂಡು ಜಿಮ್‌ಗೆ ಹೋಗಿರ್ತೀವಿ. ಅಲ್ಲಿನ ಫೋಟೊಗಳು ಕೂಡ ಲೀಕ್ ಆಗುತ್ತವೆ. ನಂತರ ಬಟ್ಟೆ ಹಾಕೋಕೆ ಬರಲ್ಲ, ಬೇಕಂತಲೇ ಎಕ್ಸ್‌ಪೋಸ್ ಮಾಡುತ್ತಾರೆ, ಟೈಟ್ ಬಟ್ಟೆ ಹಾಕುತ್ತಾರೆ ಎಂದು ಹೇಳುತ್ತಾರೆ.
ನಾನು ಪ್ರೀತಿಯಿಂದ ಪ್ಯಾಪರಾಜಿಗಳ ಬಳಿ ಮನವಿ ಮಾಡಿದ್ದೇನೆ, ಈಗ ಯಾರು ನನ್ನ ಫೋಟೊ ತೆಗೆಯೋದಿಲ್ಲ ಎಂದು ಜಾನ್ವಿ ಹೇಳಿದ್ದಾರೆ.