January15, 2026
Thursday, January 15, 2026
spot_img

VIRAL | ಅನ್ನ-ನೀರು ಬಿಟ್ಟು ನಾಲ್ಕು ದಿನದಿಂದ ಹನುಮನ ಪ್ರತಿಮೆಗೆ ಪ್ರದಕ್ಷಿಣೆ ಹಾಕುತ್ತಿರುವ ಶ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಾಣಿಗಳಿಗೂ ದೇವರ ಮೇಲೆ ಭಕ್ತಿ ಇದೆ ಎಂಬುದಕ್ಕೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹನುಮಾನ್ ದೇವಾಲಯದಲ್ಲಿ ನಡೆದಿರುವ ಈ ಘಟನೆ ಸಾಕ್ಷಿಯಾಗಿದೆ.

ಅನ್ನ, ನೀರು, ನಿದ್ರೆ ತ್ಯಜಿಸಿರುವ ಶ್ವಾನವೊಂದು ಕಳೆದ 3-4 ದಿನಗಳಿಂದ ಹನುಮಂತನ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ದೃಶ್ಯವನ್ನು ಹಲವರು ಪವಾಡ ಎಂದು ಕರೆಯುತ್ತಿದ್ದು, ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ನಾಯಿಯನ್ನು ನೋಡಲು ಸಾಕಷ್ಟು ಜನರು ದೇವಲಯಕ್ಕೆ ಆಗಮಿಸುತ್ತಿದ್ದಾರೆ.

ಕೊರೆಯುವ ಚಳಿಯಲ್ಲೂ ನಾಯಿಯು ಕಳೆದ 4 ದಿನಗಳಿಂದ ಪ್ರದಕ್ಷಿಣೆ ಹಾಕುತ್ತಲೇ ಇದ್ದು, ಕೆಲವರು ಆ ನಾಯಿಗೆ ಆರೋಗ್ಯ ಸಮಸ್ಯೆ ಇರಬಹುದು ಎಂದು ಕಳವಳ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ಆ ನಾಯಿಗೆ ಹನುಮಾನ್ ಆಶೀರ್ವಾದವಿದೆ ಎಂದು ಹೇಳುತ್ತಿದ್ದಾರೆ.

Most Read

error: Content is protected !!