March 8, 2026
Sunday, March 8, 2026
spot_img

ಆರೆಸ್ಸೆಸ್‌ಗೆ ನೂರು ವರ್ಷ: ಈಗ ಎಲ್ಲರ ಚಿತ್ತ ಫೆ.19 ರಂದು ತೆರೆಗೆ ಬರುವ ‘ಶತಕ್‌’ನತ್ತ!


ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಂಘದ ಹೆಜ್ಜೆಗುರುತು, ಸಂಘ ಹಮ್ಮಿಕೊಂಡ ಸಮಾಜಮುಖಿ ಕಾರ್ಯಗಳು, ಐತಿಹಾಸಿಕ ಬೆಳವಣಿಗೆಗಳನ್ನು ಬಿಚ್ಚಿಡುವ ಚಲನಚಿತ್ರ ‘ಶತಕ್‌’ ನ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದು, ಇದೇ ಫೆಬ್ರವರಿ19 ರಂದು ಚಿತ್ರ ದೇಶದಾದ್ಯಂತ ತೆರೆ ಕಾಣಲಿದೆ.

ಎಡಿಎ 360 ಡಿಗ್ರಿಯು ಪನೋರಮಾ ಸ್ಟುಡಿಯೋಸ್ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಈ ಚಿತ್ರವನ್ನು ಆಶಿಶ್ ಮಾಲ್ ನಿರ್ದೇಶಿಸಿದ್ದಾರೆ. ವೀರ್ ಕಪೂರ್ ಹಾಗೂ ಆಶಿಶ್ ತಿವಾರಿ ಇದರ ನಿರ್ಮಾಪಕರಾಗಿದ್ದಾರೆ. ಬಹಳಷ್ಟು ಕುತೂಹಲ ಮೂಡಿಸಿರುವ ಈ ಚಲನಚಿತ್ರದಲ್ಲಿ ದೇಶದಲ್ಲಿ ಆರೆಸ್ಸೆಸ್ ನಡೆದುಬಂದ ಹಾದಿ ಹಾಗೂ ಅದು ಕೈಗೊಂಡ ಮಹತ್ವದ ಅಂಶಗಳನ್ನು ಕಟ್ಟಿಕೊಡಲಾಗಿದೆ.

ಚಿತ್ರದಲ್ಲಿ ಖ್ಯಾತ ಹಿನ್ನೆಲೆಗಾಯಕ ಸುಖ್ವಿಂದರ್ ಸಿಂಗ್ ಹಾಡಿರುವ ‘ಭಗ್‌ವಾ ಅಪ್‌ನೀ ಪೆಹಚಾನ್ ಹೈ’ ಹಾಡು ಈಗಾಗಲೇ ಜನಮನಗೆದ್ದಿದ್ದು, ದೇಶಪ್ರೇಮವನ್ನು ಬಡಿದೆಬ್ಬಿಸುತ್ತಿದೆ. ಇದನ್ನು ಖುದ್ದು ಸರಸಂಘ್ ಚಾಲಕ್ ಮೋಹನ್ ಭಾಗವತ್ ಮೆಚ್ಚಿಕೊಂಡಿದ್ದರಲ್ಲದೆ, ಈ ಗೀತೆ ಅತ್ಯಂತ ತೃಪ್ತಿ ನೀಡಿದೆ ಎಂದು ಹಾಡುಗಾರ ಸುಖ್ವಿಂದರ್ ಕೂಡಾ ಹೇಳಿಕೊಂಡಿದ್ದರು.

ಆರೆಸ್ಸೆಸ್‌ಗೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ‘ಶತಕ’ ಶೀರ್ಷಿಕೆಯಡಿ ಧ್ವಜ ಯಾತ್ರೆ ಕೂಡಾ ಆಯೋಜಿಸಲಾಗಿದೆ. ಯಾತ್ರೆಯ ಮೂಲಕ ದೇಶದಲ್ಲಿ ಶಾಂತಿ, ಸಂಸ್ಕೃತಿ, ರಾಷ್ಟ್ರಭಕ್ತಿ ಬೆಳಗುವುವ ಉದ್ದೇಶ ಹೊಂದಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !