ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ನಾಯಿಯನ್ನು ಮತ್ತೊಂದು ನಾಯಿ ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೇಬ್ರಿಯಲ್ ಕಾರ್ನೋ ಎಂಬುವವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಈ ವಿಡಿಯೋವನ್ನು ಇದುವರೆಗೆ 20 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವೀಡಿಯೊದಲ್ಲಿ, ನಾಯಿಯೊಂದು ಮರದ ಕಡ್ಡಿ ತರಲು ನದಿಗೆ ಹಾರಿ, ನೀರಿನ ರಭಸಕ್ಕೆ ಆ ಶ್ವಾನ ಕೊಚ್ಚಿಹೋಗುತ್ತಿದ್ದು, ಕೂಡಲೇ ದಡದಲ್ಲಿದ್ದ ಮತ್ತೊಂದು ಶ್ವಾನ ತನ್ನ ಬಾಯಿಯ ಸಹಾಯದಿಂದ ಅದನ್ನು ಮೇಲೆತ್ತಿದೆ.
ತನ್ನ ಸ್ನೇಹಿತನನ್ನು ರಕ್ಷಿಸಿದ ಶ್ವಾನವನ್ನು ಜನ ಶ್ಲಾಘಿಸಿದರೆ, ಇತರರು ಪ್ರಾಣಿಗಳ ಜೀವದ ಜೊತೆ ಈ ರೀತಿ ಆಟವಾಡದಂತೆ ವಿರೋಧಿಸಿದ್ದಾರೆ.
Dog Saves Friend from Drowning pic.twitter.com/3aE07tUN5p
— Gabriele Corno (@Gabriele_Corno) September 26, 2022