ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮುವಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ನಿಯಂತ್ರಣ ರೇಖೆಯ ಬಳಿ ಎರಡು ಶ್ವಾನಗಳು ಸೈನಿಕರೊಂದಿಗೆ ಯೋಗ ಮಾಡುತ್ತಿರುವ ವಿಡಿಯೋವನ್ನು ಭದ್ರತಾ ಪಡೆಗಳು ಹಂಚಿಕೊಂಡಿವೆ.
ಭದ್ರತಾ ಪಡೆಗಳು ಬಿಡುಗಡೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ, ಯೋಗ ಮ್ಯಾಟ್ ಮೇಲೆ ಯೋಗ ಮಾಡುತ್ತಿರುವ ಸೈನಿಕರನ್ನು ಮಿಲಿಟರಿ ಶ್ವಾನಗಳು ಅನುಸರಿಸಿವೆ.
ಗಸ್ತು ತಿರುಗುವುದು, ಟ್ರ್ಯಾಕಿಂಗ್, ರಕ್ಷಣಾ ಕಾರ್ಯಾಚರಣೆಗಳು ಮತ್ತು ಸ್ಫೋಟಕ ಪತ್ತೆಯನ್ನು ಒಳಗೊಂಡಿರುವ ಸಾಮಾನ್ಯ ಕರ್ತವ್ಯಗಳನ್ನು ಹೊಂದಿರುವ ಶ್ವಾನಗಳು ಇಂದು ಯೋಗ ಮ್ಯಾಟ್‍ನಲ್ಲಿ ತನ್ನ ಚುರುಕುತನವನ್ನು ಹೇಗೆ ಪ್ರದರ್ಶಿಸಿತು ಎಂಬುದು ಅದ್ಭುತವಾಗಿದೆ.
#Watch | Akhnoor, Jammu | Indian Army soldiers perform Yoga along with dog squad at LOC #YogaForSelfAndSociety #InternationalYogaDay2024 #IDY2024 @moayush pic.twitter.com/Kay6IF7Dd2
— DD News (@DDNewslive) June 21, 2024