‘ಡಾನ್’ ಸಿನಿಮಾ ನಿರ್ದೇಶಕ ಚಂದ್ರ ಬರೋಟ್ ನಿಧನ: ಬಾಲಿವುಡ್‌ನ ಗಣ್ಯರಿಂದ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೆಸರಾಂತ ಚಿತ್ರ ನಿರ್ದೇಶಕ ಚಂದ್ರ ಬರೋಟ್ ಇಂದು ಮುಂಜಾನೆ ಮುಂಬೈನ ಬಾಂದ್ರಾದ ಗುರು ನಾನಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಆರೋಗ್ಯ ಹದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಹಲೋಕ ತ್ಯಜಿಸಿದ್ದಾರೆ.

ಚಂದ್ರ ಬರೋಟ್ ಅವರು 1978ರಲ್ಲಿ ಅಮಿತಾಭ್ ಬಚ್ಚನ್ ಅಭಿನಯದ ಐಕಾನಿಕ್ ಚಿತ್ರ ಡಾನ್ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದರು. ಅವರ ಚೊಚ್ಚಲ ನಿರ್ದೇಶನವೇ ಈ ಚಿತ್ರವಾಗಿದ್ದು, ಅದರಿಂದಲೇ ಅವರಿಗೆ ಅಪಾರ ಯಶಸ್ಸು ಹಾಗೂ ಖ್ಯಾತಿ ಲಭಿಸಿತ್ತು. ‘ಡಾನ್’ ಸಿನೆಮಾವನ್ನು ನಂತರದ ಹಲವು ನಿರ್ದೇಶಕರು ಹೊಸ ರೂಪದಲ್ಲಿ ಮರುನಿರ್ಮಿಸಿದ್ದರು. ಆದರೆ, ಅದರ ಮೂಲ ಆವೃತ್ತಿಯ ಛಾಯಾಚಿತ್ರ, ಟೈಟ್ಲ್ ಟ್ರ್ಯಾಕ್ ಹಾಗೂ ಕಥೆ ಇಂದಿಗೂ ಪ್ರೇಕ್ಷಕರ ನೆನಪಿನಲ್ಲಿ ಜೀವಂತವಾಗಿದೆ.

ಚಂದ್ರ ಬರೋಟ್ ಅವರ ನಿಧನದ ಸುದ್ದಿಯನ್ನು ಅವರ ಕುಟುಂಬದವರು ಅಧಿಕೃತವಾಗಿ ತಿಳಿಸಿದೆ. ಬಾಲಿವುಡ್‌ನ ಹಲವಾರು ಗಣ್ಯರು, ಕಲಾವಿದರು ಹಾಗೂ ನಿರ್ದೇಶಕರು ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!