ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಶ್ರೀಕೃಷ್ಣ ಮಿತ್ರ ಮಂಡಳಿ ಶಾಲಾ ವಿದ್ಯಾರ್ಥಿಗಳಿಗೆ ಈ ಬಾರಿ ತನ್ನ 18ನೇ ವರ್ಷದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಯಶಸ್ವಿಯಾಗಿ ಪೂರೈಸುವ ಮೂಲಕ ಶಿಕ್ಷಣ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮಂಡಳಿ ಅಧ್ಯಕ್ಷರಾದ ಪಾಟೀಲ್ ಮೆಸ್ಕಾಂ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಯ ಸವಿತಾ ಅವರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಹತ್ವ ಮತ್ತು ಶ್ರೀಕೃಷ್ಣ ಮಿತ್ರ ಮಂಡಳಿಯ ಸಮಾಜ ಸೇವೆ ಕುರಿತು ವಿವರಿಸಿದರು. ಅತಿಥಿಗಳನ್ನು ಶಿಕ್ಷಕ ಚಂದ್ರಮೋಹನ್ ಸ್ವಾಗತಿಸಿದರು. ಮಂಡಳಿಯ ಬಾಲಕೃಷ್ಣ ಶೆಟ್ಟಿ ಖಂಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಮಂಡಳಿಯ ಖಜಾಂಜಿ ಗಣೇಶ ಕೈಯೂರು ಸದಸ್ಯರಾದ ರಮೇಶ್ ಕೋಕಳ, ವೆಂಕಪ್ಪ ಶೆಟ್ಟಿ ಮಂಚಿ ಬಾವ, ದಿವಾಕರ ಶೆಟ್ಟಿ, ದಿನೇಶ್ ಖಂಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 163 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ನೆರವೇರಿಸಲಾಯಿತು. ಶಾಲಾಧ್ಯಪಕರಾದ ಗಣಪತಿ ದೊಡ್ಡಮನಿ ಅವರು ವಂದಿಸಿದರು.
ಪುದ್ದೋಟು ಶಾಲೆಯಲ್ಲಿ
ಪುದ್ದೋಟಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಶ್ರೀಕೃಷ್ಣ ಮಿತ್ರ ಮಂಡಳಿ ಸಾರಥ್ಯದಲ್ಲಿ ಎಂಟನೇ ವರ್ಷದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನೆರವೇರಿತು.
ಅಧ್ಯಕ್ಷತೆಯನ್ನು ಮಂಚಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನ ದಾಸ ಶೆಟ್ಟಿ ಪುದ್ದೋಟು ವಹಿಸಿದ್ದರು. ವೇದಿಕೆಯಲ್ಲಿ ಮಂಡಳಿಯ ಅಧ್ಯಕ್ಷ ಪಾಟೀಲ್ ಮೆಸ್ಕಾಂ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ನಾಯಕ್, ನಿವೃತ್ತ ಅಧ್ಯಾಪಕ ಅಬ್ದುಲ್ ಖಾದರ್ ಹಾಗೂ ಮಂಡಳಿಯ ಸದಸ್ಯರಾದ ಗಣೇಶ್ ಕೈಯ್ಯೂರು, ದಿನೇಶ್ ಖಂಡಿಗ, ವೆಂಕಪ್ಪ ಶೆಟ್ಟಿ ದಿವಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಖಂಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಸ್ತಕ ವಿತರಣೆಯ ಮಹತ್ವದ ಕುರಿತು ಬಾಲಕೃಷ್ಣ ಶೆಟ್ಟಿ ಖಂಡಿಗ ವಿದ್ಯಾರ್ಥಿಗಳನ್ನು ಉದ್ವೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಮಹತ್ವದ ಕುರಿತು ಸಮಾರಂಭದ ಅಧ್ಯಕ್ಪತೆ ವಹಿಸಿದ್ದ ಮೋಹನ್ ದಾಸ್ ಶೆಟ್ಟಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಗಣೇಶ್ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕಿ ಆಶಾಲತಾ ಧನ್ಯವಾದ ಸಮರ್ಪಿಸಿದರು. ಇಲ್ಲಿ ಒಟ್ಟು 40 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.