ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈದ್ಯಕೀಯ ಕಾಲೇಜುಗಳಿಗೆ ಶೈಕ್ಷಣಿಕ ಅಧ್ಯಯನ ಹಿನ್ನೆಲೆಯಲ್ಲಿ ಮಾನವ ಮೃತದೇಹಗಳನ್ನು ನೀಡುವ ಮೂಲಕ ಕೇರಳ ರಾಜ್ಯದ ಬೊಕ್ಕಸಕ್ಕೆ 3.66 ಕೋಟಿ ರೂ.ಆದಾಯ ಬಂದಿದೆ.
ಶೈಕ್ಷಣಿಕ ಉದ್ದೇಶಗಳಿಗಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳು ವಾರಸುದಾರರಿಲ್ಲದ ಮೃತ ದೇಹಗಳನ್ನು ದಾನವಾಗಿ ಪಡೆಯಲು 2008ರಲ್ಲಿ ವಿಶೇಷ ನಿಬಂಧನೆಯನ್ನು ಮಾಡಲಾಗಿತ್ತು. ಆ ಬಳಿಕದ ಅಂಕಿ ಅಂಶ ಇದಾಗಿದೆ.
ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಇದುವರೆಗೆ ಒಟ್ಟು 1,122 ವಾರಸುದಾರರಿಲ್ಲದ ದೇಹಗಳನ್ನು ಹಸ್ತಾಂತರಿಸಲಾಗಿದೆ. ಎರ್ನಾಕುಳಂ ಜನರಲ್ ಆಸ್ಪತ್ರೆಯಿಂದ ಅತಿ ಹೆಚ್ಚು ಮೃತ ದೇಹಗಳನ್ನು ವರ್ಗಾಯಿಸಲಾದ್ದರೆ, ಪರಿರಾಮ್ ವೈದ್ಯಕೀಯ ಕಾಲೇಜು ನಂತರದ ಸ್ಥಾನದಲ್ಲಿದೆ. ತ್ರಿಶೂರ್ ವೈದ್ಯಕೀಯ ಕಾಲೇಜು, ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆ ಬಳಿಕದ ಸ್ಥಾನದಲ್ಲಿದೆ.