March 10, 2026
Tuesday, March 10, 2026
spot_img

ಗೊತ್ತಿಲ್ಲದವರ ಮದುವೆಗೆ ಹೋಗಿ ಉಂಡು ಪೆದ್ದರಾಗ್ಬೇಡಿ, ಆಹ್ವಾನ ಇಲ್ಲದೆ ಒಳಗೆ ಹೋದ್ರೆ ಐದು ಸಾವಿರ ರೂ. ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಾಸ್ಟೆಲ್‌ ಹುಡುಗರು, ಹುಡುಗಿಯರು, ಕೆಲ ಜನರು ಒಂದಿಲ್ಲಾ ಒಂದು ಬಾರಿಯಾದ್ರೂ ಗೊತ್ತಿಲ್ಲದವರ ಮದುವೆಗೆ ಹೋಗಿ ಊಟ ಮಾಡಿಕೊಂಡು ವಾಪಾಸ್‌ ಬಂದಿರುತ್ತಾರೆ. ಆದರೆ ಇದು ಕಾನೂನು ಪ್ರಕಾರ ತಪ್ಪು ಅನ್ನೋದು ಗೊತ್ತಾ?

ಹೌದು, ಮದುವೆ ಮನೆಯಲ್ಲಿ ಆಹ್ವಾನ ಇಲ್ಲದೆ ಊಟ ಮಾಡಿದ್ದಾರೆ ಎಂದು ಗೊತ್ತಾದ್ರೂ ಮದುವೆ ಹೋಸ್ಟ್‌ ಮಾಡಿದವರು ಏನೂ ಮಾಡೋದಿಲ್ಲ. ಆದರೆ ಕೆಲವು ಕಡೆ ಕರೆಯದೇ ಮದುವೆಗೆ ಹೋಗಿ ಊಟ ಮಾಡಿದರೆ ಅದಕ್ಕೂ ಫೈನ್‌ ಇದೆಯಂತೆ. ಈ ಚರ್ಚೆ ಮುನ್ನೆಲೆಗೆ ಬರೋಕೆ ಕಾರಣ ಇದೆ.

ತೆಲುಗು ಜನರ ಸಮಾರಂಭವೊಂದರ ಹಾಲ್​ನ ಹೊರಭಾಗದಲ್ಲಿ ಹಾಕಲಾಗಿರುವ ಬೋರ್ಡ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಮಾರಂಭಕ್ಕೆ ಸಂಬಂಧಿಸದವರು ಒಳಗೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಂಥವರಿಗೆ ಸೆಕ್ಷನ್ 441 ರ ಅಡಿಯಲ್ಲಿ 3 ತಿಂಗಳು ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಎಂದು ಆ ಬೋರ್ಡ್‌ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 441 (ಈಗ ಭಾರತೀಯ ನ್ಯಾಯ ಸಂಹಿತಾ ಅಥವಾ BNS ಎಂದು ಬದಲಾಗಿದ್ದು, ಸೆಕ್ಷನ್ 329 ಆಗಿದೆ) ಕ್ರಿಮಿನಲ್ ಅತಿಕ್ರಮಣಕ್ಕೆ ಸಂಬಂಧಿಸಿದೆ. ಅಂದರೆ, ಯಾರಾದರೂ ವ್ಯಕ್ತಿಯ ಖಾಸಗಿ ಆಸ್ತಿ ಅಥವಾ ಅವರು ಕಾರ್ಯಕ್ರಮ ನಡೆಸುತ್ತಿರುವ ಸ್ಥಳಕ್ಕೆ ಅವರ ಅನುಮತಿಯಿಲ್ಲದೆ ಪ್ರವೇಶಿಸಿದರೆ ಅದು ಅಪರಾಧವಾಗುತ್ತದೆ.

ಈ ನಿಯಮದ ಅಡಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ವಿಧಿಸಬಹುದಾಗಿದೆ ಎಂದು ಕಾನೂನು ಹೇಳುತ್ತದೆ. ಕೆಲ ಸಂದರ್ಭಗಳಲ್ಲಿ ಆಯೋಜಕರು ದಂಡ ವಿಧಿಸುವ ಬಗ್ಗೆ ಕೂಡಾ ಎಚ್ಚರಿಕೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !