ಸಾಮಾಗ್ರಿಗಳು
ಹಾಗಲಕಾಯಿ – 5
ರವೆ/ಒರಟಾದ ಅಕ್ಕಿ ಹಿಟ್ಟು – ಕಾಲು ಕಪ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ನಿಂಬೆ – 1
ಎಣ್ಣೆ – 4 ಟೀಸ್ಪೂನ್
ಮಾಡುವ ವಿಧಾನ
ಮೊದಲಿಗೆ ಹಾಗಲಕಾಯಿಯ ಸಿಪ್ಪೆ ಸುಲಿದು, ತೆಳುವಾದ, ಉದ್ದದ ಪಟ್ಟಿಗಳಾಗಿ ಕತ್ತರಿಸಿಕೊಳ್ಳಿ.
ಅದಕ್ಕೆ ಉಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ ಸುಮಾರು 15 ನಿಮಿಷಗಳ ಕಾಲ ಪಕ್ಕಕ್ಕಿಡಿ. ಈ ವೇಳೆ ಹಾಗಲಕಾಯಿಯಿಂದ ನೀರು ಬಿಡುಗಡೆಯಾಗಿ ಕಹಿ ಕಡಿಮೆಯಾಗುತ್ತದೆ.
ಈಗ ರವೆ ಅಥವಾ ಒರಟಾದ ಅಕ್ಕಿ ಹಿಟ್ಟನ್ನು ಒಂದು ಬಟ್ಟಲಿಗೆ ಹಾಕಿ. ಅದಕ್ಕೆ ಅರಶಿನ ಮತ್ತು ಕೆಂಪು ಮೆಣಸಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ ಪಕ್ಕಕ್ಕಿಡಿ.
ಹಾಗಲಕಾಯಿಯಿಂದ ಬಿಡುಗಡೆಯಾದ ನೀರನ್ನು ಹರಿಸಿಕೊಳ್ಳಿ.
ಅಕ್ಕಿ ಹಿಟ್ಟಿನ ಮಿಶ್ರಣಕ್ಕೆ ಹಾಗಲಕಾಯಿ ತುಂಡುಗಳನ್ನು ಹಾಕಿ ಸುತ್ತಲೂ ಕೋಟ್ ಆಗುವಂತೆ ಮಿಶ್ರಣ ಮಾಡಿಕೊಳ್ಳಿ.
ಈಗ ಪ್ಯಾನ್ ಅನ್ನು ಬಿಸಿ ಮಾಡಿ, ಅದಕ್ಕೆ ಎಣ್ಣೆ ಹಾಕಿ.
ಈಗ ಹಾಗಲಕಾಯಿ ತುಂಡುಗಳನ್ನು ಕಾದ ಎಣ್ಣೆಯಲ್ಲಿ ಬಿಟ್ಟು ಸುತ್ತಲೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ.