March 26, 2026
Thursday, March 26, 2026
spot_img

ವಾಟ್ಸಾಪ್ ಫಾರ್ವರ್ಡ್ ಮೆಸೇಜ್ ನೋಡಿ ಗಾಬರಿ ಆಗ್ಬೇಡಿ: ನಮ್ಮಲ್ಲಿ ಇಂಧನ ‘ಹೌಸ್ ಫುಲ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಾಗಲಿದೆ ಎಂಬ ಗಾಳಿ ಸುದ್ದಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಫುಲ್ ಸ್ಟಾಪ್ ಇಟ್ಟಿದೆ. ಭಾರತದ ಇಂಧನ ಪೂರೈಕೆ ವ್ಯವಸ್ಥೆ ಭದ್ರವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ದೇಶದ ಎಲ್ಲಾ ಪೆಟ್ರೋಲ್ ಬಂಕ್ ಮತ್ತು ಗ್ಯಾಸ್ ಏಜೆನ್ಸಿಗಳಲ್ಲಿ ಬೇಕಾದಷ್ಟು ಸ್ಟಾಕ್ ಇದೆ. ಪೂರೈಕೆಯಲ್ಲಿ ಯಾವುದೇ ಕಡಿತ ಮಾಡಿಲ್ಲ. “ಇಂಡಿಯಾ ಹತ್ತಿರ ಇರೋದು ಬರೀ 6 ದಿನದ ಸ್ಟಾಕ್ ಮಾತ್ರ” ಅನ್ನೋದು ಬರೀ ಸುಳ್ಳು. ನಮ್ಮ ಹತ್ತಿರ ಬರೋಬ್ಬರಿ 60 ದಿನಗಳಿಗೆ ಆಗುವಷ್ಟು ಇಂಧನ ದಾಸ್ತಾನು ಇದೆ. ದಿನಕ್ಕೆ 50 ಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳು ವಿತರಣೆಯಾಗುತ್ತಿವೆ. ಉತ್ಪಾದನೆಯನ್ನು ಶೇ. 40 ರಷ್ಟು ಹೆಚ್ಚಿಸಲಾಗಿದ್ದು, ಕೊರತೆಯ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದೆ.

ಭಾರತ ಇಡೀ ಜಗತ್ತಿನಲ್ಲೇ 4ನೇ ದೊಡ್ಡ ಸಂಸ್ಕರಣಾಗಾರ ಹೊಂದಿದ್ದು, 150ಕ್ಕೂ ಹೆಚ್ಚು ದೇಶಗಳಿಗೆ ಇಂಧನ ರಫ್ತು ಮಾಡುತ್ತಿದೆ. ಹಾಗಾಗಿ ನಮ್ಮ ದೇಶದ ಅಗತ್ಯಗಳನ್ನು ಪೂರೈಸಲು ಸರ್ಕಾರ ಸಶಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ಹಾದಿ ತಪ್ಪಿಸುವ ಅಥವಾ ಭಯ ಹುಟ್ಟಿಸುವ ಮೆಸೇಜ್ ಹಂಚುವುದು ಕ್ರಿಮಿನಲ್ ಅಪರಾಧ. ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಖಡಕ್ ವಾರ್ನಿಂಗ್ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !