October 18, 2026
Sunday, October 18, 2026
spot_img

RCB ಪ್ರೇಮಿಗಳೇ ಅಟೆನ್ಷನ್ ಪ್ಲೀಸ್: ಮ್ಯಾಚ್ ನೋಡೋಕೆ ಬರೋ ಮುನ್ನ ಈ ನ್ಯೂಸ್ ಒಮ್ಮೆ ಓದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾರ್ಚ್ 28ರಿಂದ ಐಪಿಎಲ್ ಧಮಾಕಾ ಶುರುವಾಗ್ತಿದೆ. ಫಸ್ಟ್ ಮ್ಯಾಚ್ ನಮ್ಮ RCB ವರ್ಸಸ್ SRH. ಸ್ಟೇಡಿಯಂ ಸುತ್ತಮುತ್ತ ಟ್ರಾಫಿಕ್ ಜಾಮ್ ಆಗಬಾರದು ಅಂತ ಸಂಚಾರಿ ಪೊಲೀಸರು ಈಗಲೇ ಮಾಸ್ಟರ್ ಪ್ಲಾನ್ ರೆಡಿ ಮಾಡಿದ್ದಾರೆ.

ಸ್ಟೇಡಿಯಂ ಸುತ್ತಮುತ್ತ ಎಲ್ಲೂ ಗಾಡಿ ನಿಲ್ಲಿಸುವಂತಿಲ್ಲ. ಪಾರ್ಕಿಂಗ್‌ಗೆ ಅಂತಾನೇ ಬೇರೆ ಕಡೆ ಜಾಗ ಫಿಕ್ಸ್ ಮಾಡಿದ್ದಾರೆ. ಓಲಾ, ಉಬರ್ ಅಥವಾ ಆಟೋದಲ್ಲಿ ಬರೋರಿಗೆ ಪಿಕ್-ಅಪ್ ಮತ್ತು ಡ್ರಾಪ್ ಮಾಡೋಕೆ ಸಪರೇಟ್ ಸ್ಪಾಟ್ ಇರುತ್ತೆ.

ಕಳೆದ ಜೂನ್ 4ರ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಂತಹ ಘಟನೆಗಳು ಮರುಕಳಿಸಬಾರದು ಅಂತ ಪೊಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದೆ.

“ಗಾಡಿ ತಂದು ಟ್ರಾಫಿಕ್‌ನಲ್ಲಿ ಸಿಕ್ಕಿಕೊಳ್ಳೋ ಬದಲು, ಆರಾಮಾಗಿ ಮೆಟ್ರೋ ಅಥವಾ ಬಿಎಂಟಿಸಿ ಬಸ್ ಬಳಸಿ” ಅನ್ನೋದು ಪೊಲೀಸರ ಕಿವಿಮಾತು.

Must Read