ಸಂಜೆ ಕಾಫ್ಫ್ ಟೈಮ್ ಗೆ ನಾಲಗೆಗೆ ರುಚಿಕರವಾದ ಕುರ್ಕುರಿ ಭಿಂಡಿ ಒಂದು ವಿಭಿನ್ನ ಮತ್ತು ರುಚಿಕರ ಆಯ್ಕೆ.ಮನೆಮಂದಿಗೆ ಹೊಸ ರೀತಿಯ ತಿನಿಸು ತಯಾರಿಸಬೇಕೆಂದು ಯೋಚಿಸುತ್ತಿದ್ದರೆ, ಈ ಕುರ್ಕುರಿ ಭಿಂಡಿ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
250 ಗ್ರಾಂ ಭಿಂಡಿ ಅಥವಾ ಬೆಂಡೆಕಾಯಿ
3 ಚಮಚ ಕಡಲೆ ಹಿಟ್ಟು
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1/4 ಟೀಸ್ಪೂನ್ ಅರಿಶಿನ ಪುಡಿ
2 ಚಮಚ ಚಾಟ್ ಮಸಾಲಾ
ಉಪ್ಪು
ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ಬೆಂಡೆಕಾಯಿಯನ್ನು ತೊಳೆದು ಒಣಗಿಸಿ. ತೆಳುವಾಗಿ ಉದ್ದಕ್ಕೆ ಕತ್ತರಿಸಿ. ಈಗ ಒಂದು ದೊಡ್ಡ ಬಟ್ಟಲಿನಲ್ಲಿ ಕಡಲೆ ಹಿಟ್ಟು, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಚಾಟ್ ಮಸಾಲ ಮತ್ತು ಉಪ್ಪನ್ನು ಮಿಶ್ರಣ ಮಾಡಿ. ಇದಕ್ಕೆ ಬೆಂಡೆಕಾಯಿ ಸೇರಿಸಿ ಚನ್ನಾಗಿ ಕಲಸಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದ್ಕಕೆ ಈ ಬೆಂಡೆಕಾಯಿ ಹಾಕಿ ತಿಳಿ ಕಂದು ಬಣ್ಣಕ್ಕೆ ಬರುವವರೆಗೆ ಡೀಪ್-ಫ್ರೈ ಮಾಡಿದರೆ ಕುರ್ಕುರಿ ಭಿಂಡಿ ರೆಡಿ.