March 22, 2026
Sunday, March 22, 2026
spot_img

ಇವರ ಸಹವಾಸಾನೇ ಬೇಡಪ್ಪ..! ಪಾಕಿಸ್ತಾನ ಲೀಗ್‌ ತೊರೆದ ವಿದೇಶಿ ಆಟಗಾರರು

ಹೊಸದಿಗಂತ ಡಿಜಿಟಲ್ ಡೆಸ್ಕ್:

IPL 2026 ಆರಂಭಕ್ಕೆ ದಿನಗಳು ಬಾಕಿ ಇರುವಾಗಲೇ, ಅದಕ್ಕೆ ಟಕ್ಕರ್ ನೀಡುವ PSL 2026 ಈಗ ಸಂಕಷ್ಟಕ್ಕೆ ಸಿಲುಕಿದೆ. ಲೀಗ್ ಆರಂಭಕ್ಕೂ ಮುನ್ನವೇ ಹಲವು ವಿದೇಶಿ ಆಟಗಾರರು ಹಿಂದೆ ಸರಿಯುತ್ತಿರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.

ಮಾರ್ಚ್ 26ರಿಂದ ಆರಂಭವಾಗಲಿರುವ ಪಿಎಸ್‌ಎಲ್‌ನಲ್ಲಿ ಈಗಾಗಲೇ ಎಂಟು ವಿದೇಶಿ ಆಟಗಾರರು ಭಾಗವಹಿಸುವುದನ್ನು ಕೈಬಿಟ್ಟಿದ್ದಾರೆ. ಆಸ್ಟ್ರೇಲಿಯಾದ ಜ್ಯಾಕ್ ಫ್ರೇಸರ್ ಮೆಕ್‌ಗುರ್ಕ್ ಹಾಗೂ ಸ್ಪೆನ್ಸರ್ ಜಾನ್ಸನ್ ಸೇರಿದಂತೆ ಹಲವರು ಲೀಗ್‌ನಿಂದ ಹೊರಗುಳಿದಿದ್ದಾರೆ.

ಇನ್ನು ವೆಸ್ಟ್ ಇಂಡೀಸ್‌ನ ಜಾನ್ಸನ್ ಚಾರ್ಲ್ಸ್, ಅಫ್ಘಾನಿಸ್ತಾನದ ರಹಮಾನಲ್ಲಾ ಗುರ್ಬಾಜ್, ಇಂಗ್ಲೆಂಡ್‌ನ ಟೈಮಲ್ ಮಿಲ್ಸ್ ಸೇರಿದಂತೆ ಇನ್ನೂ ಕೆಲವರು ಕೂಡ ಭಾಗವಹಿಸುವುದಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ:

ಕೆಲವು ವರದಿಗಳ ಪ್ರಕಾರ, ಅಫ್ಘಾನಿಸ್ತಾನ ತನ್ನ ಆಟಗಾರರಿಗೆ ಪಿಎಸ್‌ಎಲ್‌ನಲ್ಲಿ ಭಾಗವಹಿಸಲು ನಿರ್ಬಂಧ ಹೇರಿದೆ ಎನ್ನಲಾಗಿದೆ. ಜೊತೆಗೆ, ಐಪಿಎಲ್‌ನಲ್ಲಿ ಆಡುವ ಅವಕಾಶ, ವೈಯಕ್ತಿಕ ಕಾರಣಗಳು ಹಾಗೂ ಭದ್ರತಾ ಚಿಂತನೆಗಳು ಆಟಗಾರರ ಹಿಂಪಡೆಯ ಪ್ರಮುಖ ಕಾರಣಗಳಾಗಿವೆ.

ಈ ಬೆಳವಣಿಗೆಗಳಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕಳವಳಗೊಂಡಿದ್ದು, ಒಪ್ಪಂದ ಉಲ್ಲಂಘಿಸಿದ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಆದರೆ ಆಟಗಾರರು ಅದನ್ನು ಲೆಕ್ಕಿಸದೆ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಗಮನಾರ್ಹ.

ಲೀಗ್ ಆರಂಭಕ್ಕೂ ಮುನ್ನವೇ ಈ ರೀತಿಯ ಹಿನ್ನಡೆ ಎದುರಾಗಿರುವುದು ಪಿಎಸ್‌ಎಲ್ ಯಶಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !