ಹೊಸದಿಗಂತ ವರದಿ ಮಂಡ್ಯ :
ಸಿದ್ದರಾಮಯ್ಯ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಾರೆ. ಇದನ್ನು ನಂಬಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸತ್ಯವನ್ನು ಮರೆ ಮಾಚಲು ಎಂದಿಗೂ ಸಾಧ್ಯವಿಲ್ಲ ಗ್ಯಾರಂಟಿ ಯೋಜನೆಗೆ ಹಣ ಇಲ್ಲಾ ಎಂದು ಬೊಬ್ಬೆ ಹೊಡಿತಿದ್ದಾರೆ. ಬಿಜೆಯವರ ಇನ್ನೊಂದು ಹೆಸರೇ ಸುಳ್ಳು. ಸುಳ್ಳೇ ಅವರ ಮನೆ ದೇವ್ರು. ಗೊಬ್ಬದ ಅಭಾವ ಇಲ್ಲ. ಆದರೆ ಕೇಂದ್ರ ಸರ್ಕಾರ ಕೊಡಬೇಕಾದ ಗೊಬ್ಬರ ಕೊಟ್ಟಿಲ್ಲ ನಾನು ಗೊಬ್ಬರ ಬೇಕು ಎಂದು ಪತ್ರ ಬರೆದಿದ್ದೆ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ವಿಜೇಂದ್ರನಿಂದ ಕಲಿಯಬೇಕು, ಯಡಿಯೂರಪ್ಪ ಗೊಬ್ಬರ ನೀಡದೆ ಗೋಲಿಬಾರ್ ಮಾಡಿಸಿ ರೈತರನ್ನು ಸಾಯಿಸಿದ್ದರು. ಗೊಬ್ಬರವನ್ನು ರಾಜ್ಯ ಸರ್ಕಾರ ತಯಾರು ಮಾಡಲ್ಲ. ಕೇಂದ್ರ ಸರ್ಕಾರದವರು ಗೊಬ್ಬರ ಕೊಡೋದು. ಇಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರು ನಡ್ಡಾ ಬಳಿ ಹೋಗಿ ಗೊಬ್ಬರ ಕೊಡಿಸುವ ಕೆಲಸ ಮಾಡಬೇಕು. ಇವರು ಏನು ಬೂಟಾಟಿಕೆ ಮಾಡಿದರೂ 2028ಕ್ಕೆ ಮತ್ತೆ ನಾವೇ ಗೆಲ್ಲೋದು. ಕೇಂದ್ರದಲ್ಲಿ ಕುಮಾರಸ್ವಾಮಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಅವರು ಹೇಳಿ ಗೊಬ್ಬರ ಕೊಡಿಸಲಿ, ಬಿಜೆಪಿಯವರ ನಾಟಕ ಬಹಳ ದಿನ ನಡೆಯಲ್ಲ ಎಂದು ಎಚ್ಚರಿಸಿದರು.