ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಜೆಟ್ ಸಭೆಯಲ್ಲಿ ಜೈ ಶ್ರೀರಾಮ್ ಜೈ ಬೀಮ್ ಎಂಬ ಘೋಷಣೆ ಕೂಗಿದ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದರು. ಚಿಕ್ಕಬಳ್ಳಾಪುರದಲ್ಲಿ ಭಾಷಣ ಮಾಡಿದ ಅವರು, ರಾಜಕೀಯದಲ್ಲಿ ಧರ್ಮದ ವಿಚಾರ ಪ್ರಸ್ತಾಪಿಸಬೇಡಿ ಎಂದು ಬಿಜೆಪಿಗೆ ಪದೇ ಪದೇ ಹೇಳುತ್ತೇನೆ ಎಂದರು.
ನಮ್ಮಂತಹ ಹಿಂದುಳಿದವರಿಗೆ ಶ್ರೀರಾಮನೂ ದೇವರೆ ಅಂಬೇಡ್ಕರ್ ದೇವರೇ. ನನ್ನಂತಹ ಹಿಂದುಳಿದವರಿಗೆ ಅಂಬೇಡ್ಕರ್ ದೇವರು. ಅಂಬೇಡ್ಕರ್ ಅವರ ಆಶೀರ್ವಾದದಿಂದ ನನ್ನಂತಹ ಹುಡುಗ ಶಾಸಕನಾದ.
ನಂತರ ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವುದಾಗಿ ತಿಳಿಸಿದರು.