ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಆಲಿಯಾ ಭಟ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಹೌದು, ಹೆಸರೇನೋ ಬದಲಾವಣೆ ಆಗಿದೆ ಆದರೆ ಹೆಚ್ಚು ಚೇಂಜಸ್ ಇಲ್ಲ.
ಹೌದು, ಇಷ್ಟು ದಿನ ಆಲಿಯಾ ಭಟ್ ಆಗಿದ್ದ ನಟಿ ಇದೀಗ ತಮ್ಮ ಹೆಸರನ್ನು ಆಲಿಯಾ ಕಪೂರ್ ಎಂದು ಬದಲಾಯಿಸಿಕೊಂಡಿದ್ದಾರೆ.
ರಣ್ಬೀರ್ ಕಪೂರ್‌ರನ್ನು ಮದುವೆಯಾದ ನಂತರವೂ ನಟಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿರಲಿಲ್ಲ. ಆದರೆ ಇತ್ತೇಚೆಗೆ ಆಲಿಯಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇದಕ್ಕೆ ಪುರಾವೆ ಸಿಕ್ಕಿದೆ.
ಆಲಿಯಾ ಭಟ್ ಅವರು ವ್ಲಾಗ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಹೋಟೆಲ್ ರೂಂನ ದೃಶ್ಯ ಕೂಡ ಇದೆ. ಹೋಟೆಲ್ನಲ್ಲಿ ‘ಆಲಿಯಾ ಕಪೂರ್’ ಎಂದು ಬರೆಯಲಾಗಿದೆ. ಹೀಗಾಗಿ, ಆಲಿಯಾ ಭಟ್ ಅವರು ಅಧಿಕೃತವಾಗಿ ಹೆಸರು ಬದಲಿಸಿಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.