ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಪ್ರಮುಖ ಆಕರ್ಷಣೆ ಜನಪರ ಗ್ಯಾರಂಟಿ ಯೋಜನೆಗಳು, ಈ ಯೋಜನೆಗಳ ಜಾರಿಗೆ ಜನರು ಕಾಯುತ್ತಿದ್ದು, ಈ ಬಗ್ಗೆ ಬಜೆಟ್‌ಗೂ ಮುನ್ನ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ.
ಇದೇ ವರ್ಷ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡ್ತೇವೆ, ಇದರ ಬಗ್ಗೆ ಅನುಮಾನ ಬೇಡ, ಹೇಳಿದ್ದನ್ನು ಮಾಡೋ ಸರ್ಕಾರ ನಮ್ಮದು, ಈಗಾಗಲೇ ಒಂದೊಂದೇ ಗ್ಯಾರೆಂಟಿ ಜಾರಿ ಮಾಡ್ತಾ ಇದ್ದೇವೆ. ಪ್ರತಿಪಕ್ಷಗಳ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ, ಅವರು ನಮಗೆ ಪ್ರಚಾರ ಕೊಡ್ತಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ.