ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾತ್ರಿ ಊಟ ಮಾಡಿದ ಬಳಿಕವೂ ಕೆಲವರಿಗೆ ಮಧ್ಯರಾತ್ರಿ ಹಸಿವಾಗೋದಕ್ಕೆ ಶುರುವಾಗತ್ತೆ. ಆದರೆ ತಡರಾತ್ರಿ ಏನಪ್ಪಾ ತಿನ್ನೋದು ಅಂತ ಯೋಚನೆ ಕೂಡ ಎದುರಾಗುತ್ತದೆ. ಹಸಿವು ಅಂತ ಕೈಗೆ ಸಿಕ್ಕಿದ್ನೆಲ್ಲಾ ತಿನ್ನುವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಒಂದು ವೇಳೆ ನಿಮಗೆ ತಡರಾತ್ರಿಯಲ್ಲಿ ಹಸಿವಾದ್ರೆ ಈ ಆಹಾರಗಳನ್ನು ಅಪ್ಪಿ ತಪ್ಪಿಯೂ ಸೇವಿಸಲೇಬೇಡಿ. ಯಾವ ಆಹಾರ ಸೇವಿಸಬಾರದು ಎಂದು ಇಲ್ಲಿ ತಿಳಿಯಿರಿ.
1. ಪಿಜ್ಜಾ
ರಾತ್ರಿ ಹಸಿವಾದ ಸಮಯದಲ್ಲಿ ಹೆಚ್ಚಿನವರ ಮೊದಲ ಆಯ್ಕೆ ಅಂದ್ರೆ ಅದು ಪಿಜ್ಜಾ. ಅದ್ರಲ್ಲೂ ಮಕ್ಕಳು ಹಾಗೂ ಯುವಕರಿಗಂತೂ ಪಿಜ್ಜಾ ಪ್ರಿಯವಾದ ಆಹಾರ. ರಾತ್ರಿ ಸಮಯದಲ್ಲಿ ಪಿಜ್ಜಾ ತಿನ್ನೋದು ಒಳ್ಳೆಯದಲ್ಲ. ಇದರಿಂದ ಹೊಟ್ಟೆನೋವು, ಅಸ್ವಸ್ಥತೆ ಮತ್ತು ಹೊಟ್ಟೆ ಉಬ್ಬುವುದು ಈ ರೀತಿ ಸಮಸ್ಯೆಗಳು ಎದುರಾಗುತ್ತವೆ. ಇನ್ನೂ ಚೀಸ್ ಹಾಕಿರೋದ್ರಿಂದ ಇದ್ರಲ್ಲಿ ಕೊಬ್ಬಿನ ಅಂಶ ಅಧಿಕವಾಗಿದ್ದು, ನಮ್ಮ ತೂಕ ಹೆಚ್ಚಾಗಲೂ ಕಾರಣವಾಗುತ್ತದೆ. ಹಾಗಾಗಿ ತಡರಾತ್ರಿ ಪಿಜ್ಜಾ ತಿನ್ನುವುದು ಬೇಡ.
2. ಚಿಪ್ಸ್
ಹೆಚ್ಚಿನವರು ಹಸಿವಾದಾಗ ಚಿಪ್ಸ್ ಪ್ಯಾಕೆಟ್ ಹಿಡ್ಕೊಂಡು ಕೂತ್ಕೋತ್ತಾರೆ. ಟಿವಿ ನೋಡುತ್ತಾ ಎಷ್ಟು ಚಿಪ್ಸ್ ಹೊಟ್ಟೆಯೊಳಗಡೆ ಹೋಯ್ತು ಅನ್ನೋದೇ ಗೊತ್ತಾಗೋದಿಲ್ಲ. ಚಿಪ್ಸ್ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದ್ರಲ್ಲಿ ಉಪ್ಪು ಹಾಗೂ ಕಾರ್ಬೋಹೈಡ್ರೇಟ್ ಪ್ರಮಾಣ ಅಧಿಕವಾಗಿರುತ್ತದೆ. 3 ಕಪ್ ಪಾಪ್‌ಕಾರ್ನ್‌ನಲ್ಲಿ ಇರುವ ಕ್ಯಾಲೋರಿಗಳು 12 ಚಿಪ್ಸ್‌ನಲ್ಲಿ ಇರುತ್ತೆ. ಹೀಗಾಗಿ ಚಿಪ್ಸ್ ತಿನ್ನೋದನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.