ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಅಪಾರ ಪ್ರಮಾಣದ ಮಳೆ ನೀರು ರಸ್ತೆಗೆ ಹರಿದು ಬರುತ್ತಿರುವ ಹಿನ್ನೆಲೆ ಹೊಸೂರು ರಸ್ತೆಯಲ್ಲಿವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್ನಿದ ರೂಪೇನ ಅಗ್ರಹಾರವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಸಂಚಾರ ಪೊಲೀಸರು ಎಲಿವೆಟೇಡ್ ಫ್ಲೈಓವರ್ ಕೂಡ ಬಂದ್ ಮಾಡಿದ್ದಾರೆ. ಪರ್ಯಾಯ ಮಾರ್ಗ ಬಳಸುವಂತೆ ನಗರ ಸಂಚಾರ ಪೊಲೀಸರು ವಾಹನ ಸವಾರರಿಗೆ ಸೂಚನೆ ನೀಡಿದ್ದಾರೆ.