ಸಾಮಾಗ್ರಿಗಳು
ಬೆಳ್ಳುಳ್ಳಿ – 30
ಹುಣಸೆಹಣ್ಣು – ನಿಂಬೆ ಗಾತ್ರ
ಎಣ್ಣೆ – 6 ಟೀಸ್ಪೂನ್
ಜೀರಿಗೆ – 1/2 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಕಾಳುಮೆಣಸಿನ ಪುಡಿ – 1 ಟೀಸ್ಪೂನ್
ಕರಿಬೇವಿನ ಎಲೆಗಳು – 1 ಸ್ವಲ್ವ
ಬೆಲ್ಲ – ಚಿಕ್ಕ ಪೀಸ್
ಬ್ಯಾಡಿಗೆ ಕೆಂಪು ಮೆಣಸಿನಕಾಯಿ ಪುಡಿ- 1 ಟೀಸ್ಪೂನ್
ನೀರು – ಅಗತ್ಯಕ್ಕೆ ತಕ್ಕಷ್ಟು ನೀರು
ಉಪ್ಪು – ರುಚಿಗೆ ಬೇಕಾದಷ್ಟು
ಮಾಡುವ ವಿಧಾನ
ಮೊದಲಿಗೆ ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ ಇಟ್ಟುಕೊಂಡು ರಸ ತೆಗೆದುಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಿ.
ಬಳಿಕ ಮಿಕ್ಸರ್ ಜಾರ್‌ಗೆ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ತುಂಬಾ ಸಣ್ಣಗೆ ಅಲ್ಲದೆ ಮಧ್ಯಮದಲ್ಲಿ ರುಬ್ಬಿಕೊಳ್ಳಿ.
ಬಳಿಕ ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಆರು ಟೀಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಸಾಸಿವೆ ಹಾಗೂ ಜೀರಿಗೆ ಹಾಕಿಕೊಳ್ಳಬೇಕಾಗುತ್ತದೆ.
ರುಬ್ಬಿಕೊಂಡ ಬೆಳ್ಳುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹಾಕಿ, ಬೆಳ್ಳುಳ್ಳಿಯ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿಕೊಳ್ಳಿ.
ಬ್ಯಾಡಗಿ ಕೆಂಪು ಮೆಣಸಿನಕಾಯಿ ಪುಡಿ ಹಾಕಬೇಕು, ಸಣ್ಣ ಉರಿಯಲ್ಲಿ 2 ನಿಮಿಷ ಹುರಿದುಕೊಳ್ಳಿ.
ಈಗ ಅದರಲ್ಲಿ ನಿಮಗೆ ಅಗತ್ಯವಿರುವಷ್ಟು ನೀರು ಹಾಕಿಕೊಳ್ಳಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸರಿಯಾಗಿ ಕುದಿಸಬೇಕು.
ಬಳಿಕ ಅದರಲ್ಲಿ ಹುಣಸೆಹಣ್ಣಿನ ರಸ ಹಾಕಬೇಕು, ಇದರ ಹಸಿ ವಾಸನೆ ಹೋಗುವವರೆಗೆ ಬೇಯಿಸಿಬೇಕು.
ಅಂತಿಮವಾಗಿ ಬೆಲ್ಲ ಪೀಸ್ ಹಾಕಿ, ಉಪ್ಪು ಮತ್ತು ಖಾರ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ರುಚಿ ಹೇಗೆ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಉಪ್ಪು ಮತ್ತು ಖಾರ ಕಡಿಮೆ ಇದ್ದರೆ ಆ್ಯಡ್ ಮಾಡಿ, ಇಲ್ಲದಿದ್ದರೆ ಬೇಡ. ಸೂಪರ್ ರುಚಿಕರ ಮಸಾಲೆ ಬೆಳ್ಳುಳ್ಳಿ ಚಟ್ನಿ ಸವಿಯಲು ಸಿದ್ಧವಾಗಿದೆ.