ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪುನೀತ್ ರಾಜ್‌ಕುಮಾರ್ ಜಗತ್ತನ್ನು ಅಗಲಿ ಇಂದಿಗೆ ಮೂರು ವರ್ಷವಾಗಿದೆ. ಪುನೀತ್ ಸಮಾಧಿಯ ಬಳಿ ಕುಟುಂಬದವರು ಪೂಜೆ ಮಾಡಿದ್ದಾರೆ.
ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಯುವ ರಾಜ್‌ಕುಮಾರ್ ಮಾತನಾಡಿ, ಚಿಕ್ಕಪ್ಪ ಪುನೀತ್ ಜೊತೆಗಿನ ಒಡನಾಟವನ್ನು ಸ್ಮರಿಸಿದರು. ನಾವೆಲ್ಲರೂ ಅವರ ತರ ಬದುಕೋಕೆ ಪ್ರಯತ್ನಿಸೋಣ ಎಂದು ಯುವ ಮಾತನಾಡಿದರು.
ಅವರಿಲ್ಲದೇ ಮೂರು ವರ್ಷ ಹೇಗಾಯ್ತು ಅಂತ ಗೊತ್ತಾಗುತ್ತಿಲ್ಲ. ಅವರ ಜೊತೆ ಮಾತನಾಡದೇ ಕಷ್ಟ, ಸುಖ ಹಂಚಿಕೊಳ್ಳದ ದಿನಾನೇ ಇರಲಿಲ್ಲ. ಪ್ರತಿದಿನ ಅವರು ನಮ್ಮ ಜೊತೆ ಇರುತ್ತಾರೆ. ಅವರ ಹಾರೈಕೆ ನಮ್ಮೆಲರ ಮೇಲಿದೆ ಎಂದಿದ್ದಾರೆ