Tuesday, December 16, 2025

ಅಂಕೋಲಾದಲ್ಲಿ ಕೇಣಿ ಬಂದರು ಬೇಡ: ಸಿಎಂ ಸಿದ್ದರಾಮಯ್ಯಗೆ ಮನವಿ

ಹೊಸದಿಗಂತ ವರದಿ ಅಂಕೋಲಾ :

ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಬಂದರು ಯೋಜನೆಯಿಂದ ಸ್ಥಳೀಯ ಜನಜೀವನಕ್ಕೆ ಮತ್ತು ಮೀನುಗಾರಿಕೆಗೆ ತೀವ್ರ ತೊಂದರೆ ಎದುರಾಗುವುದರಿಂದ ಇದನ್ನು ಕೈ ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಣಿ ಬಂದರು ವಿರೋಧಿ ಸಮಿತಿ ಮಂಗಳವಾರ ಮನವಿ ನೀಡಿ ಒತ್ತಾಯಿಸಿದೆ.
ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ನೇತೃತ್ವದಲ್ಲಿ ಪ್ರಮುಖರಾದ ಪ್ರಮೋದ ಬಾನಾವಳಿಕರ್, ಸಂಜೀವ ಬಲೆಗಾರ್ ಮತ್ತಿತರರು ಇದ್ದರು.

error: Content is protected !!