Friday, January 9, 2026

KNOW WHY | ಮಧ್ಯರಾತ್ರಿ ಎಚ್ಚರ ಆದ್ರೆ ಅಪ್ಪಿತಪ್ಪಿಯೂ ಟೈಮ್‌ ನೋಡ್ಬೇಡಿ!

ರಾತ್ರಿ ಮಲಗಿ ಸೀದ ಬೆಳಗ್ಗೆ ಏಳುವವರನ್ನು ಲಕ್ಕಿಫೆಲೋಗಳೆಂದು ಕರೆಯಬಹುದು. ಆದರೆ ಎಲ್ಲರಿಗೂ ಇಡೀ ರಾತ್ರಿ ಮಲಗುವಂಥ ನಿದ್ದೆ ಬರೋದಿಲ್ಲ. ಮಧ್ಯದಲ್ಲಿ ಒಂದೆರಡು ಬಾರಿ ಎದ್ದಾಳುತ್ತಾರೆ. ಕೆಲವರು ಬಾತ್‌ರೂಮ್‌ಗಾಗಿ ಏಳುತ್ತಾರೆ. ಹಲವರಿಗೆ ರಾತ್ರಿ ಎರಡೆರಡು ಬಾರಿ ಎಚ್ಚರ ಆಗುತ್ತದೆ. ಮತ್ತೆ ಮಲಗೋದಕ್ಕೆ ಸಾಧ್ಯವೇ ಇಲ್ಲದಂತೆ ಆಗುತ್ತದೆ. ಆಗ ಫೋನ್‌ ಮೊರೆ ಹೋಗುತ್ತಾರೆ. ಅಲ್ಲಿಗೆ ಅಂದಿನ ನಿದ್ದೆ ಕಥೆ ಫಿನಿಷ್‌!

ಮಧ್ಯರಾತ್ರಿ ಎಚ್ಚರ ಆದರೆ ಯಾವ ಕಾರಣಕ್ಕೂ ಟೈಮ್‌ ನೋಡ್ಬೇಡಿ. ಗಡಿಯಾರದಲ್ಲೇ ಆಗಿರಲಿ, ಮೊಬೈಲ್‌ನಲ್ಲೇ ಆಗಿರಲಿ ಟೈಮ್‌ ನೋಡೋದಕ್ಕೆ ಹೋಗ್ಬೇಡಿ. ಒಮ್ಮೆ ನೋಡಿದ್ರೆ ದಿನವೂ ಅದೇ ಟೈಮ್‌ಗೆ ಎಚ್ಚರ ಆಗುತ್ತದಂತೆ.

ಹೌದು, ಒಮ್ಮೆ ಟೈಮ್‌ ನೋಡಿದರೆ ನಿಮ್ಮ ಮೆದುಳು ಆ ಟೈಮ್‌ನ್ನು ರಿಜಿಸ್ಟರ್‌ ಮಾಡಿಕೊಳ್ಳುತ್ತದೆ. ಮತ್ತೆ ಬೆಳಗ್ಗೆ ಎದ್ದ ನಂತರ ನಾಲ್ಕು ಜನರಿಗೆ ರಾತ್ರಿ ಎಚ್ಚರ ಆಯ್ತು ಹೇಳಿ ಹೇಳಿ ಸಮಯ ಅಚ್ಚಾಗಿ ಉಳಿಯುತ್ತದೆ. ಮರುದಿನ ರಾತ್ರಿಯೂ ಅದೇ ಸಮಯಕ್ಕೆ ಎಚ್ಚರ ಆಗುತ್ತದೆ.

ಇದನ್ನೂ ಓದಿ: ಅಮ್ಮ ಖರ್ಚಿಗೆ ಎರಡು ಲಕ್ಷ ಕೊಟ್ಟಿಲ್ಲ ಅಂತ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡ ಮಗ

ಇನ್ನು ಮೊಬೈಲ್‌ ಸ್ಕ್ರೀನ್‌ ನೋಡಿದರೆ ಮತ್ತೆ ನಿದ್ದೆ ಮಾಡೋದಕ್ಕೆ ಕಷ್ಟವಾಗುತ್ತದೆ. ಮೊಬೈಲ್‌ ನಿಮ್ಮನ್ನು ʼ ನಿನಗೆ ನಿದ್ದೆ ಬರ್ತಿಲ್ಲ ನನ್ನನ್ನು ನೋಡಿ ಸುಸ್ತಾಗಿ ಮಲಗುವಂತೆ ಬಾʼ ಎಂದು ಕರೆಯುತ್ತದೆ. ಇದಕ್ಕೆ ನೀವು ಶರಣಾಗುತ್ತೀರಿ. ಅಲ್ಲಿಗೆ ನಿದ್ದೆ ಕಥೆ ಗೋವಿಂದ.

ಇನ್ನೊಂದು ಕಾರಣ ಎಂದರೆ ಹಲವರಿಗೆ ನಿದ್ದೆ ತುಂಬಾ ಇಷ್ಟ. ಅಕಸ್ಮಾತ್‌ ನೀವು ಎದ್ದಾಗ ನಾಲ್ಕು ಗಂಟೆ ಅಥವಾ ಐದು ಗಂಟೆ ಎಂದುಕೊಳ್ಳಿ. ದಿನವೂ ನೀವು ಏಳು ಗಂಟೆಗೆ ಏಳುತ್ತೀರಿ ಎಂದಾದರೆ ನಿಮಗೆ ಟೆನ್ಶನ್‌ ಆರಂಭವಾಗುತ್ತದೆ. ಇನ್ನು ಬರೀ ಎರಡು ಗಂಟೆ ಇದೆ, ಮೂರು ಗಂಟೆ ಇದೆ ಎಂದು ಲೆಕ್ಕ ಹಾಕುತ್ತೀರಿ. ಇದು ನಿಮಗೆ ಒತ್ತಡ ತರುತ್ತದೆ.

error: Content is protected !!