ವರಮಹಾಲಕ್ಷ್ಮೀ ಹಬ್ಬದಂದು ಈ ತಪ್ಪುಗಳನ್ನು ಮಾಡಲೇಬೇಡಿ

ವರಮಹಾಲಕ್ಷ್ಮಿ ಹಬ್ಬವು ಸಂಪತ್ತು, ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವಾದ ಹಬ್ಬವಾಗಿದೆ. ಈ ದಿನದಂದು ಮಹಿಳೆಯರು ಅದರಲ್ಲೂ ವಿಶೇಷವಾಗಿ ವಿವಾಹಿತ ಮಹಿಳೆಯರು ಕಲಶವನ್ನಿಟ್ಟು, ಅದಕ್ಕೆ ಲಕ್ಷ್ಮಿ ದೇವಿಯ ಅಲಂಕಾರವನ್ನು ಮಾಡಿ ಪೂಜೆಯನ್ನು ನೆರವೇರಿಸುತ್ತಾರೆ.

ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಧನ, ಸಂಪತ್ತು ಮತ್ತು ಸಮೃದ್ಧಿ ಮಾತ್ರವಲ್ಲ, ಆಕೆಯ ಪತಿಯು ಆರೋಗ್ಯ, ಐಶ್ವರ್ಯವನ್ನು ಹೊಂದುತ್ತಾನೆ ಎನ್ನುವ ನಂಬಿಕೆಯಿದೆ. ಈ ದಿನದಂದು ತಪ್ಪುಗಳನ್ನು ಮಾಡಬೇಡಿ.. ಯಾವ ತಪ್ಪು ನೋಡಿ

ಶುದ್ಧವಾದ ಸ್ಥಳದಲ್ಲಿ ಕಲಶವನ್ನಿಟ್ಟು ಪೂಜೆಯನ್ನು ಮಾಡಬಹುದು. ಇದಲ್ಲದೇ, ದೇವಿ ಪೂಜೆಗೆಂದು ಅಥವಾ ದೇವಿಗೆ ಅಲಂಕಾರ ಮಾಡಲೆಂದು ತಂದ ಸೀರೆಯನ್ನು ಮೈಮೇಲೆ ಧರಿಸಿ ನೋಡಲು ಹೋಗಬಾರದು. ಇದನ್ನು ತಪ್ಪು ಎಂದು ಪರಿಗಣಿಸಲಾಗುತ್ತದೆ.

ಕಲಶಕ್ಕೆ ಅಲಂಕಾರವನ್ನು ಮಾಡುವಂತಹ ಸಂದರ್ಭದಲ್ಲಿ ತಾಳಿಯನ್ನು ಹಾಕಿ ಅಲಂಕರಿಸಲಾಗುತ್ತದೆ. ಯಾಕೆಂದರೆ ಅದು ಕೇವಲ ಕಲಶ ಮಾತ್ರವಲ್ಲ. ಅದು ಲಕ್ಷ್ಮಿ ದೇವಿಯ ಸ್ವರೂಪ. ಲಕ್ಷ್ಮಿ ದೇವಿಯು ಸುಮಂಗಲಿ. ಹಾಗಾಗಿ, ತಾಳಿಯನ್ನು ಹಾಕಿ ಆಕೆಯನ್ನು ಪೂಜಿಸುವುದು ಕಡ್ಡಾಯ.

ಕೆಲವೊಬ್ಬರು ತಾವು ಮಾಡಿರುವ ಅಲಂಕಾರ ಸುಂದರವಾಗಿ ಕಾಣಬೇಕೆಂದು ಪ್ಲಾಸ್ಟಿಕ್‌ ಹೂವುಗಳನ್ನು, ಲೈಟಿಂಗ್‌ಗಳನ್ನು ಬಳಸುತ್ತಾರೆ. ಇಂತಹ ತಪ್ಪನ್ನು ಮಾಡಬಾರದು.

ಲಕ್ಷ್ಮಿ ದೇವಿಗೆ ಹಸಿರು ಅಥವಾ ಕೆಂಪು ಬಣ್ಣದ ಬಳೆಗಳನ್ನು ಧರಿಸಬೇಕು. ಲಕ್ಷ್ಮಿ ದೇವಿಗೆ ಅರ್ಪಿಸುವ ಬಳೆಗಳು ಎಲ್ಲಿಯೂ ಒಡೆದಿರಬಾರದು. ವರಮಹಾಲಕ್ಷ್ಮಿ ಪೂಜೆಯಲ್ಲಿ ನೀವು ಕಪ್ಪು, ನೀಲಿ ಮತ್ತು ಬಿಳಿ, ಬೂದು ಬಣ್ಣದ ಬಳೆಗಳನ್ನು ತಪ್ಪಿಯೂ ಇಡಬಾರದು.

ನೀವು ಪೂಜೆಗೆ ಮುತ್ತೈದೆಯರನ್ನು ಆಹ್ವಾನಿಸಿದ ಸಮಯದಲ್ಲಿ ಗರ್ಭಿಣಿ ಮಹಿಳೆಯರು ಬಂದರೆ ಅವರನ್ನು ಯಾವುದೇ ಕಾರಣಕ್ಕೂ ಅವಮಾನಿಸಬೇಡಿ. ಅವರನ್ನು ಗೌರವದಿಂದ ಸ್ವಾಗತಿಸಿ. ಗರ್ಭಿಣಿಯರು ಬಾಗೀನ ತೆಗೆದುಕೊಳ್ಳಲು ಬಂದಾಗ ಅವರಿಗೆ ಅರಿಶಿನ, ಕುಂಕುಮವನ್ನು, ಎರಡು ತಾಂಬೂಲ, ಎರಡು ರವಿಕೆ ಪೀಸ್‌ಗಳನ್ನು ನೀಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!