ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮಿಸ್ ಮಾಡದೇ ಚಂದ್ರನನ್ನು ಕಣ್ತುಂಬಿಕೊಳ್ಳಿ, ಇಂದು ಕಾರ್ತಿಕ ಹುಣ್ಣಿಮೆ. ಈ ದಿನದಂದು ಸೂಪರ್ ಮೂನ್ ಗೋಚರವಾಗಲಿದೆ.
ಇಂದು ಚಂದ್ರನು ಭೂಮಿಗೆ ತೀರಾ ಸಮೀಪದಲ್ಲಿರಲಿದ್ದು, ದೊಡ್ಡದಾಗಿ ಕಾಣಿಸಲಿದ್ದಾನೆ. ಭೂಮಿಗೆ ದೀರ್ಘವೃತ್ತದಲ್ಲಿ 28 ದಿನಗಳಿಗೊಮ್ಮೆ ತಿರುಗುವ ಚಂದ್ರ ಭೂಮಿಗೊಮ್ಮೆ ಸಮೀಪಸುವುದುಂಟು (3,56,400ಕಿ.ಮೀ). ಆಗ ಹುಣ್ಣಿಮೆಯಾದಲ್ಲಿ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುತ್ತಾನೆ.
ಈ ವರ್ಷದ ಮೂರು ಸೂಪರ್ ಮೂನ್ಗಳಲ್ಲಿ ಅಕ್ಟೋಬರ್ ತಿಂಗಳ ವಿದ್ಯಮಾನ ಈಗಾಗಲೇ ಮುಗಿದಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಇಂತಹದೇ ವಿದ್ಯಮಾನ ಜರುಗಲಿದೆ. ಭೂಮಿಗೆ ಅತೀ ಸಮೀಪ ಇವತ್ತಿನ ಹುಣ್ಣಿಮೆಯಂದು ಚಂದ್ರ ಬರಲಿದ್ದಾನೆ. ಅಂದರೆ ಇಂದು ನಡೆಯಲಿರುವ ಹುಣ್ಣಿಮೆಯೇ ಈ 2ನೇ ಸೂಪರ್ ಮೂನ್ ಆಗಿದೆ. ಹೀಗಾಗಿ ಚಂದ್ರ ಅತಿದೊಡ್ಡದಾಗಿರಲಿದ್ದು, ಬೆಳದಿಂಗಳಿಂದ ಕೂಡಿರುವುದರಿಂದ ಆಕಾಶದಲ್ಲಿ ಚಂದ್ರ ಮಿರ ಮಿರ ಮಿಂಚಲಿದ್ದಾನೆ.

