April 11, 2026
Saturday, April 11, 2026
spot_img

HEALTH | ಬೇಸಿಗೆಯಲ್ಲಿ ಮಿಸ್‌ ಮಾಡದೇ ಈ ಐದು ಹಣ್ಣುಗಳನ್ನು ತಿಂದುಬಿಡಿ

ಬೇಸಿಗೆಯಲ್ಲಿ ಮಾತ್ರ ಸಿಗುವ ಹಣ್ಣುಗಳಿವೆ. ಅವುಗಳನ್ನು ಮಿಸ್‌ ಮಾಡದೇ ತಿನ್ನಿ, ಅನಾರೋಗ್ಯದ ಕಾರಣದಿಂದಾಗಿ ಕೆಲವೊಮ್ಮೆ ಹಣ್ಣುಗಳನ್ನು ತಿನ್ನೋದಕ್ಕೆ ಜನ ಇಷ್ಟಪಡೋದಿಲ್ಲ. ಶೀತ ಹಾಗೂ ಕೆಮ್ಮು ಬರುತ್ತದೆ ಎಂದು ಮಕ್ಕಳಿಗೂ ನೀಡೋದಿಲ್ಲ. ಒಂದೇ ಬಾರಿಗೆ ಹೆಚ್ಚೆಚ್ಚು ತಿನ್ನದೇ ನಿಧಾನಕ್ಕೆ ತಿನ್ನಲು ಆರಂಭಿಸಿ. ಆರೋಗ್ಯ ಚೆನ್ನಾಗಿಯೇ ಇರುತ್ತದೆ. ಯಾವ ಹಣ್ಣುಗಳನ್ನು ತಿನ್ನಬೇಕು? ಇಲ್ಲಿದೆ ಡೀಟೇಲ್ಸ್‌..

ಬೇಸಿಗೆಯಲ್ಲಿ ಮಾತ್ರ ಸಿಗುವ ಕಲ್ಲಂಗಡಿ ಹಣ್ಣನ್ನು ಮಿಸ್‌ ಮಾಡದೇ ತಿನ್ನಿ. ಇದರಲ್ಲಿ ವಿಟಮಿನ್‌ ಎ, ಬಿ6 ಹಾಗೂ ಸಿ ಇದೆ.

ಸಮ್ಮರ್‌ ಫ್ರೂಟ್ಸ್‌ನ ರಾಜ ಮಾವಿನಹಣ್ಣನ್ನು ಮಿಸ್‌ ಮಾಡೋಕೆ ಸಾಧ್ಯವೇ? ಇದರಲ್ಲಿ ಹೆಚ್ಚು ಫೈಬರ್‌ ಹಾಗೂ ಆಂಕಿಆಕ್ಸಿಡೆಂಟ್‌ಗಳಿವೆ. ಜೀರ್ಣಕ್ರಿಯೆ ಹಾಗೂ ಇಮ್ಯುನಿಟಿ ಹೆಚ್ಚು ಮಾಡುತ್ತದೆ.

ಪಪಾಯ ಚರ್ಮದ ಹೊಳಪಿಗೆ ಕಾರಣವಾಗುತ್ತದೆ. ಸೂರ್ಯನ ಕಿರಣಗಳಿಂದ ಆದ ಟ್ಯಾನ್‌ ನೈಸರ್ಗಿಕವಾಗಿ ಹೋಗಿಬಿಡುತ್ತದೆ.

ಬೇಸಿಗೆಯಲ್ಲಿ ಸಿಗುವ ಖರಬೂಜ ಹಾಗೂ ಬನಾಸ್ಪತ್ರೆ ಹಣ್ಣುಗಳನ್ನು ಮನೆಗೆ ತನ್ನಿ. ಅದಕ್ಕೆ ಬೆಲ್ಲ ಅಥವಾ ಸಕ್ಕರೆ ಹಾಕಿ ಫ್ರಿಡ್ಜ್‌ನಲ್ಲಿಟ್ಟು ಬೇಕಾದಾಗ ತಿನ್ನಿ. ಈ ಹಣ್ಣುಗಳಿಂದ ಕಣ್ಣು ಹಾಗೂ ಚರ್ಮಕ್ಕೆ ಬೂಸ್ಟ್‌ ಸಿಗುತ್ತದೆ. ದೇಹದಲ್ಲಿ ನೀರು ಇರುತ್ತದೆ.

ಬೇಸಿಗೆಯಲ್ಲಿ ಇರೋ ಒಂದೇ ಒಂದು ಖುಷಿ ಅಂದ್ರೆ ಅದು ಹಲಸಿನಹಣ್ಣು.ಇದರಲ್ಲಿರುವ ನಾರಿನಂಶ ಮತ್ತು ಪೊಟ್ಯಾಸಿಯಮ್ ಹೃದಯದ ಆರೋಗ್ಯಕ್ಕೆ ಉತ್ತಮ. ಇದು ಕ್ಯಾನ್ಸರ್ ನಿರೋಧಕ ಗುಣಗಳನ್ನು ಹೊಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !