Friday, December 12, 2025

ಮಕ್ಕಳಿಗೆ ರೋಡ್‌ಸೈಡ್‌ ಐಸ್‌ಕ್ರೀಂ ಕೊಡಿಸೋ ಮುನ್ನ ಈ ಸುದ್ದಿಯನ್ನು ಮಿಸ್‌ ಮಾಡದೇ ಓದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತುಮಕೂರಿನ ಐಸ್‌ ಕ್ರೀಂ ತಯಾರಿಕೆಯ ಫ್ಯಾಕ್ಟರಿಯೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತುಮಕೂರಿನಲ್ಲಿ ಅನುಮತಿ ಇಲ್ಲದ ಐಸ್​ಕ್ರೀಮ್ ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ. ಪಾಲಿಕೆಯ ನಿಯಮವಿರಲಿ, ಅನುಮತಿಯೂ ಇಲ್ಲದೇ, ಇತ್ತ ಶುಚಿತ್ವ ಇಲ್ಲದೇ, ಮಕ್ಕಳ ಆರೋಗ್ಯಕ್ಕೆ ಕುತ್ತು ತರುವ ಆತಂಕ ಮೂಡಿಸಿದೆ.

ಖಚಿತ ಮಾಹಿತಿ ಆಧರಿಸಿ ತುಮಕೂರು ತಹಶೀಲ್ದಾರ್ ರಾಜೇಶ್ವರಿ ನೇತೃತ್ವದಲ್ಲಿ ಗುಬ್ಬಿಗೇಟ್ ಬಳಿಯ ದಿಲ್ ಕುಶ್ ಎಂಬ ಐಸ್​ಕ್ರೀಮ್ ಫ್ಯಾಕ್ಟರಿ ಮೇಲೆ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಯೋಗೀಶ್, ಜಿಲ್ಲಾ ಆಹಾರ ಅಧಿಕಾರಿ ಹರೀಶ್ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಂದ ಏಕಕಾಲದಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸ್ಪೋಟಕ ಅಂಶಗಳು ಬಯಲಾಗಿವೆ. ಫ್ಯಾಕ್ಟರಿಯಲ್ಲಿ ಯಾವುದೇ ಶುಚಿತ್ವ ಇಲ್ಲದೇ ಇರುವುದು, ಪರವಾನಗಿ ಇಲ್ಲದಿರುವುದು ಕಂಡುಬಂದಿದೆ. ಈ ಮೂಲಕ ಆಹಾರ ಇಲಾಖೆ ಫ್ಯಾಕ್ಟರಿಗೆ ದಂಡ ಹಾಕಿ, ಪಾಲಿಕೆ ಆರೋಗ್ಯಾಧಿಕಾರಿ ಬೀಗ ಜಡಿದಿದ್ದಾರೆ.

error: Content is protected !!