ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಟೆಸ್ಟ್ ನಾಯಕತ್ವದ ಹುದ್ದೆಗೆ ಯಾರು ಬೆಸ್ಟ್ ಚಾಯ್ಸ್ ಎನ್ನುವ ಕುರಿತು ಎಲ್ಲರಿಗೂ ಕುತೂಹಲ ಇದ್ದೆ ಇದೆ. ನಾಯಕತ್ವದ ಪಟ್ಟಿಯಲ್ಲಿ ಬುಮ್ರಾ, ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಹೆಸರುಗಳು ಕೇಳಿಬಂದಿವೆ.
ಈಗ ಟೀಂ ಇಂಡಿಯಾ ಮಾಜಿ ಹೆಡ್ಕೋಚ್ ರವಿಶಾಸ್ತ್ರಿ ಟೆಸ್ಟ್ ನಾಯಕತ್ವದ ಕುರಿತು ತಮ್ಮ ಸಲಹೆ ನೀಡಿದ್ದಾರೆ. ಭಾರತದ ವೇಗದ ಬೌಲರ್ ಬುಮ್ರಾ ಮೇಲೆ ಒತ್ತಡವನ್ನು ಹೆಚ್ಚಿಸುವ ಬದಲು, ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಅವರಿಗೆ ನಾಯಕತ್ವ ಪಟ್ಟ ಕಟ್ಟುವುದು ಒಳ್ಳೆಯದು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಟೀಂ ಇಂಡಿಯಾ ನೂತನ ಟೆಸ್ಟ್ ನಾಯಕನನ್ನು ನೇಮಕಮಾಡುವ ಮುನ್ನ ಆಯ್ಕೆ ಸಮಿತಿಯು ಭವಿಷ್ಯತೆಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ. ಭಾರತ ಟೆಸ್ಟ್ ನಾಯಕತ್ವಕ್ಕೆ ನೀವು ಯಾರನ್ನಾದರೂ ತಯಾರು ಮಾಡಿ. ಸದ್ಯ ಶುಭ್ಮನ್ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ನಾನು ಹೇಳುತ್ತೇನೆ. ಅವರಿಗೆ ಅವಕಾಶ ನೀಡಿ. ಅವರಿಗೆ 25, 26 ವರ್ಷ, ಅವರಿಗೆ ಸಮಯ ಕೊಡಿ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಶುಭ್ಮನ್ ಗಿಲ್ ವಿದೇಶಿ ಪಿಚ್ನಲ್ಲಿ ನೀಡುತ್ತಿರುವ ಪ್ರದರ್ಶನದ ಬಗ್ಗೆ ಕಳವಳಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಅವರು ವಿದೇಶಿ ಪ್ರವಾಸದಲ್ಲಿ ಯಶಸ್ಸು ಗಳಿಸಲಿದ್ದಾರೆ ಎಂದು ರವಿಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶುಭ್ಮನ್ ಗಿಲ್, ಈ ಬಾರಿಯ ಇಂಗ್ಲೆಂಡ್ ಸರಣಿಯಲ್ಲಿ ದೊಡ್ಡ ಇನ್ನಿಂಗ್ಸ್ ಆಡುವ ವಿಶ್ವಾಸವಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.