June 23, 2026
Tuesday, June 23, 2026
spot_img

ದಿನಭವಿಷ್ಯ: ವೃತ್ತಿಯಲ್ಲಿ ಹೊಸ ಅವಕಾಶ ಸಿಕ್ಕಾಗ ಬೇಡ ಎನ್ನಬೇಡಿ, ತಕ್ಷಣ ಒಪ್ಪಿಕೊಳ್ಳಿ

ಮೇಷ.
ನೀವು ಎಸಗಿದ ತಪ್ಪುಗಳನ್ನು ಸರಿಪಡಿಸಲು ಗಮನ ಕೊಡಿ. ತಪ್ಪು ಒಪ್ಪಿಕೊಳ್ಳುವುದರಲ್ಲಿ ನಾಚಿಕೆ ಇಲ್ಲ. ಆರೋಗ್ಯ ಸಮಸ್ಯೆ ಕಾಡಬಹುದು.
ವೃಷಭ
 ವೃತ್ತಿಯಲ್ಲಿ ಮಂದಗತಿ ಕಾಯ್ದುಕೊಳ್ಳಿ. ಮುಂಚೂಣಿಗೆ ಬರಬೇಡಿ. ಹಣ ಹೂಡಿಕೆಗೆ ದೀರ್ಘಾವಽ ಯೋಜನೆ ಒಳ್ಳೆಯದು.
ಮಿಥುನ
ಆತ್ಮೀಯರ ಒತ್ತಡ ಕಡಿಮೆ ಮಾಡಲು ನಿಮ್ಮ ಪ್ರಯತ್ನವಿರಲಿ. ಹಣ ಹೂಡಿಕೆ ಇಂದು ಒಳಿತಲ್ಲ. ವೃತ್ತಿಯಲ್ಲಿ ತುಸು ಹಿನ್ನಡೆ ಕಾಣುವಿರಿ. ಧನವ್ಯಯ.            
ಕಟಕ
ವೃತ್ತಿಯಲ್ಲಿ ಹೊಸ ಅವಕಾಶ ಕಾಣಲಿದೆ. ಸದುಪಯೋಗ ಮಾಡಿ. ಮನಕೊಪ್ಪುವ ಸಂಗಾತಿ ಸಿಕ್ಕಿಯಾರು. ಸಂಬಂಧ ದೃಢವಾದೀತು.        
ಸಿಂಹ
ವೃತ್ತಿ ಬದಲಿಸಲು ಯೋಜಿಸಿದ್ದರೆ ಕಾಲ ಪಕ್ವವಾಗಿದೆ. ಹಣದ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬದಿರಿ. ಆರೋಗ್ಯ ಸಮಸ್ಯೆ.
ಕನ್ಯಾ
ಮನೆಯವರು ನಿಮ್ಮಿಂದ ಹೆಚ್ಚು ಗಮನ ಅಪೇಕ್ಷಿಸುವರು. ವೃತ್ತಿ ಒತ್ತಡದಲ್ಲೇ ಮುಳುಗದಿರಿ. ಆಹಾರದ ಅತಿಸೇವನೆ ಹೊಟ್ಟೆ ಕೆಡಿಸಬಹುದು.                    
ತುಲಾ
ದಿನವಿಡೀ ಗೊಂದಲದ ಮನಸ್ಥಿತಿ. ವೃತ್ತಿಯಲ್ಲಿ ಹೊಸ ಸವಾಲು. ಭಾವನೆ ಬದಿಗಿಟ್ಟು ವೃತ್ತಿಪರತೆಯಿಂದ ನಿಭಾಯಿಸಿ.            
ವೃಶ್ಚಿಕ
ಯಾವುದೇ ಕೆಲಸಕ್ಕೆ ಇಂದು ಹೆಚ್ಚುವರಿ ಶ್ರಮ ಅಗತ್ಯ. ಅಡೆತಡೆ ಉಂಟಾಗಲಿದೆ. ಆಸಕ್ತಿಕರ ವ್ಯಕ್ತಿಯ ಭೇಟಿ. ಸಂಬಂಧ ಬಲಗೊಳ್ಳಲಿದೆ.            
ಧನು
ಸಣ್ಣ ಆರೋಗ್ಯ ಸಮಸ್ಯೆ ಕಾಡಿದರೂ ನಿರ್ಲಕ್ಷ್ಯ ಬೇಡ. ಸೂಕ್ತ ಚಿಕಿತ್ಸೆ ಕೂಡಲೇ ನಡೆಸಿ. ವೃತ್ತಿಯ ಒತ್ತಡ ಇಂದು ಕಡಿಮೆಯಾಗಲಿದೆ.              
ಮಕರ
ಆಪ್ತರ ಜತೆ ಭಿನ್ನಾಭಿಪ್ರಾಯ ಸಂಭವ.ಕೂಡಲೇ ಬಗೆಹರಿಸಿ. ಹೊಸ ವ್ಯವಹಾರದಲ್ಲಿ ಹಣ ಹೂಡಿಕೆ ನಿರೀಕ್ಷಿತ ಫಲಿತಾಂಶ ನೀಡದು.  
ಕುಂಭ
ಹಣದ ಬಿಕ್ಕಟ್ಟು ಕಾಡಬಹುದು. ಸೂಕ್ತ ಸಲಹೆ ಕೇಳಿಪಡೆಯಿರಿ. ಆರೋಗ್ಯ ಕಾಪಾಡಲು ಸೂಕ್ತ ಮುನ್ನೆಚ್ಚರಿಕೆ ವಹಿಸಿ. ಧನವ್ಯಯ ಅಽಕ.      
ಮೀನ
ಹಣದ ವ್ಯವಹಾರ ಸರಿದಾರಿಗೆ ತನ್ನಿ. ಖರ್ಚು ಕಡಿಮೆ ಮಾಡಿ. ಸಣ್ಣ ವಿಷಯಗಳು ಹೆಚ್ಚು ಕಿರಿಕಿರಿ ಸೃಷ್ಟಿಸುವವು. ಸಮಚಿತ್ತ ಅವಶ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !