ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಗ್ಗೆ ಯಾರೂ ಸಿಟ್ಟು ಮಾಡಿಕೊಳ್ಳಬೇಡಿ. ಸಂಸತ್‌ನಲ್ಲಿ ಏನು ಚರ್ಚೆಯಾಗಬೇಕೋ ಅದನ್ನು ಮಾಡಿ ಎಂದು ವಿಪಕ್ಷಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.
ಸೋಲು ಅನುಭವಿಸಿದವರು ಸೋಲಿನಿಂದ ಪಾಠ ಕಲಿಯಬೇಕು, ನಕಾರಾತ್ಮಕ ಚಿಂತನೆಗಳನ್ನು ಬಿಟ್ಟು ಮುನ್ನಡೆಯಬೇಕು. ವಿಪಕ್ಷ ನಾಯಕರಿಗೆ ಇದು ಸುವರ್ಣಾವಕಾಶ ಸಿಟ್ಟನ್ನು ಹೊರಹಾಕುವ ಬದಲು ಸಕಾರಾತ್ಮಕತೆಯಿಂದ ಮುನ್ನಡೆಯಿರಿ ಎಂದಿದ್ದಾರೆ.
ಸಾಮಾನ್ಯವಾಗಿ ಸೋಲು ಅನುಭವಿಸಿದ ಪಕ್ಷಗಳು ಅಧಿವೇಶನದಲ್ಲಿ ಸೋಲಿನ ಸಿಟ್ಟನ್ನು ತೀರಿಸುತ್ತಾರೆ. ಇದು ಅನಾರೋಗ್ಯಕರ ಬೆಳವಣಿಗೆ. ತಪ್ಪಿನಿಂದ ಕಲಿತರೆ ಮಾತ್ರ ಜಗತ್ತು ಉತ್ತಮವಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.
ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಒಟ್ಟಾರೆ 19 ಮಸೂದೆಗಳನ್ನು ಮಂಡನೆ ಮಾಡಲು ನಿರ್ಧಾರ ಮಾಡಲಾಗಿದೆ.