ಹೊಸದಿಗಂತ ಕಲಬುರಗಿ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೂಂಡಾಗಿರಿ ನಡೆಯುವುದಿಲ್ಲ.ಪ್ರಜಾಪ್ರಭುತ್ವ ಹಾಗೂ ಗೂಂಡಾಗಿರಿ ಎಂದಿಗೂ ಒಟ್ಟಾಗಿ ಹೋಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಿಟಿ ರವಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಹುದ್ದೆಯಲ್ಲಿರುವ ವಿಪಕ್ಷ ನಾಯಕರಿಗೆ ಕಾಂಗ್ರೆಸ್ ಗೂಂಡಾಗಳನ್ನು ಛೂ ಬಿಟ್ಟು, ಐದಾರು ಗಂಟೆಗಳ ಕಾಲ ದಿಗ್ಬಂಧನ ಹಾಕಿದ್ದು, ಸಂವಿಧಾನಕ್ಕೆ ಎಸಗಿದ ಅಪಮಾನ. 1948ರಲ್ಲೆ ನಿಜಾಮನ ಶಾಸನ ಮುಗಿದಿದ್ದು, ನಿಜಾಮನ ಉತ್ತರಾಧಿಕಾರಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜಾಮಗಿರಿ ತೋರಿಸಬೇಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ತಿವಿದರು.
ವಿಪಕ್ಷ ನಾಯಕನ ಸ್ಥಾನ ಒಂದು ಸಂವಿಧಾನಿಕ ಹುದ್ದೆ. ವಿಪಕ್ಷ ನಾಯಕ ಅಂದ್ರೆ ಸ್ಯಾಡೋ ಸಿಎಂಗೆ ಸಮಾನ.ಸಂವಿಧಾನಿಕ ಹುದ್ದೆಯಲ್ಲಿರುವ ನಾಯಕನಿಗೆ ಅಪಮಾನ ಮಾಡಿದ್ದು, ಸಂವಿಧಾನಕ್ಕೆ ಮಾಡಿರುವ ಅಪಮಾನ ಎಂದ ಅವರು, ಸಂವಿಧಾನದ ಪುಸ್ತಕ ಬರೀ ಕೈಯಲ್ಲಿ ಹಿಡಿದುಕೊಂಡು ಓಡಾಡಿದರೆ ಸಾಲದು.ಅದನ್ನು ಪಾಲನೆ ಕೂಡ ಮಾಡಬೇಕು ಎಂದು ಹೇಳಿದರು.