ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಕಂಗನಾ ರನೌತ್ ಆಗಾಗ್ಗೆ ಸಿನಿಮಾಗಳನ್ನು ನೋಡಿ ರಿವ್ಯೂ ಹೇಳ್ತಾರೆ. ಎಂಥ ದೊಡ್ಡ ಸಿನಿಮಾ ಚೆನ್ನಾಗಿಲ್ಲ ಎಂದರೆ ಚೆನ್ನಾಗಿಲ್ಲ ಎಂದುಬಿಡುತ್ತಾರೆ.
ಆದರೆ ಕೆಲವೊಮ್ಮೆ ನೇರವಾಗಿ ಹೇಳೋ ಕಂಗನಾ, ಇನ್ನೂ ಹಲವು ಬಾರಿ ತಮಾಷೆಯಾಗಿ ಟಾಂಟ್ ಕೊಟ್ಟು ಸುಮ್ಮನಾಗಿ ಬಿಡ್ತಾರೆ.
ಇತ್ತೀಚೆಗಷ್ಟೇ ಬಿಗ್ ಬಜೆಟ್ ಸಿನಿಮಾ ಆದಿಪುರುಷ್ ರಿಲೀಸ್ ಆಗಿದೆ. ಸಿನಿಮಾ ಚೆನ್ನಾಗಿದೆ ಎನ್ನುವವರು ಒಂದು ಕಡೆಯಾದ್ರೆ ಹೆಚ್ಚಿನ ಮಂದಿ ಸಿನಿಮಾ ಚೆನ್ನಾಗಿಲ್ಲ ಎಂದೇ ಅಂದಿದ್ದಾರೆ. ಈ ಸಾಲಿಗೆ ಕಂಗನಾ ಕೂಡ ಸೇರಿದ್ದಾರೆ. ಆದರೆ ಇವರು ಈ ಬಾರಿ ನೇರವಾಗಿ ಹೇಳದೇ ಇಂಡೈರೆಕ್ಟ್ ಆಗಿ ಟಾಂಟ್ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸೀತಾ-ರಾಮನ ಫೋಟೊ ಹಾಕಿ, ರಾಮ್ ನಾಮ್ ಬದ್ನಾಮ್ ಮತ್ ಕರೋ.. ಎನ್ನುವ ಹಾಡನ್ನು ಹಾಕಿದ್ದಾರೆ. ರಾಮ ಹೆಸರನ್ನು ಹಾಳು ಮಾಡಬೇಡಿ ಮನುಜರೇ ಎನ್ನುವ ಹಾಡು ಇದಾಗಿದ್ದು, ಆಶ್ಚರ್ಯಕ್ಕೆ ಕಂಗನಾ ಮಾತನ್ನು ಹಲವರು ಒಪ್ಪಿದ್ದಾರೆ.