ಕೆಲವೊಮ್ಮೆ ಬಿಸಿ ಮಾಡಲು ಮರೆತರೆ ಅಥವಾ ಹೆಚ್ಚು ಕುದಿಸಿದರೂ ಹಾಲು ಒಡೆದುಹೋಗುತ್ತೆ. ಆದರೆ ಹೆಚ್ಚಿನವರು ಜನರು ಹಾಲು ಒಡೆದ ತಕ್ಷಣ ಅದು ಹಾಳಾಗಿದೆ ಎಂದು ಭಾವಿಸಿ ಅದನ್ನು ಚೆಲ್ಲಿ ಬಿಡುತ್ತಾರೆ. ಆದರೆ ಇದು ತಪ್ಪು. ಹೌದು, ಹಾಲು ಒಡೆದರೂ ಅದರಲ್ಲಿ ಇದ್ದ ಪೌಷ್ಟಿಕಾಂಶಗಳನ್ನು ಉಳಿಸಿಕೊಂಡು ಬೇರೊಂದು ರೀತಿಯಲ್ಲಿ ಉಪಯೋಗಿಸಬಹುದು.
ಇದೀಗ ಒಡೆದ ಹಾಲನ್ನು ಉಪಯೋಗಿಸಬಹುದಾದ ಕೆಲವು ಸರಳ ಮತ್ತು ಪರಿಣಾಮಕಾರಿ ವಿಧಾನಗಳನ್ನು ನೋಡೋಣ:
ಅನ್ನ ಬೇಯಿಸಲು
ಹಾಲು ಒಡೆದ ಬಳಿಕ ಬಟ್ಟೆ ಉಪಯೋಗಿಸಿ ಅದನ್ನು ಚೆನ್ನಾಗಿ ಫಿಲ್ಟರ್ ಮಾಡಿ. ಹಾಲಿನಿಂದ ಬಂದ ನೀರನ್ನು ಅನ್ನಕ್ಕೆ ಉಪಯೋಗಿಸಬಹುದು. ಈ ನೀರಿನಲ್ಲಿ ಅನ್ನ ಬೇಯಿಸಿದರೆ ಅದು ಹೆಚ್ಚು ರುಚಿಕರವಾಗುತ್ತದೆ ಮತ್ತು ಪೌಷ್ಟಿಕತೆಯೂ ಹೆಚ್ಚಾಗುತ್ತದೆ.
ಪಾಸ್ತಾ ಅಥವಾ ನೂಡಲ್ಸ್ ತಯಾರಿಕೆಯಲ್ಲಿ
ಪಾಸ್ತಾ ಅಥವಾ ನೂಡಲ್ಸ್ ಕುದಿಸಲು ಸಾಮಾನ್ಯ ನೀರಿನ ಬದಲು ಈ ಹಾಲಿನ ನೀರನ್ನು ಬಳಸಬಹುದು. ಇದರಿಂದ ತಿಂಡಿ ಹೆಚ್ಚು ಪರಿಮಳಯುಕ್ತವಾಗುತ್ತದೆ ಮತ್ತು ವಿಶಿಷ್ಟ ರುಚಿಯನ್ನು ನೀಡುತ್ತವೆ.
ಸ್ಯಾಂಡ್‌ವಿಚ್ ಸ್ಟಫಿಂಗ್ ತಯಾರಿಕೆಗೆ
ಒಡೆದ ಹಾಲಿನಲ್ಲಿ ಟೊಮೆಟೊ, ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಮಸಾಲೆಗಳನ್ನು ಸೇರಿಸಿ ಸ್ವಲ್ಪ ಫ್ರೈ ಮಾಡಿ. ಈ ಮಿಶ್ರಣವನ್ನು ಸ್ಯಾಂಡ್‌ವಿಚ್‌ನಲ್ಲಿ ಸ್ಟಫಿಂಗ್ ಆಗಿ ಉಪಯೋಗಿಸಬಹುದು.
ಚಪಾತಿ ಹಿಟ್ಟಿಗೆ ಬೆರೆಸಿ
ಚಪಾತಿ ಅಥವಾ ರೊಟ್ಟಿ ತಯಾರಿಸುವಾಗ ಹಿಟ್ಟಿಗೆ ನೀರಿನ ಬದಲಾಗಿ ಈ ಒಡೆದ ಹಾಲಿನ ನೀರನ್ನು ಬಳಸಬಹುದು. ಹಿಟ್ಟು ಮೃದುವಾಗುವುದು ಮಾತ್ರವಲ್ಲ, ಅದರಲ್ಲಿ ಪ್ರೋಟೀನ್ ಸೇರಿದಂತೆ ಇತರ ಪೌಷ್ಟಿಕಾಂಶಗಳೂ ಹೆಚ್ಚಾಗುತ್ತವೆ.
ಸೂಪ್ ಅಥವಾ ಸಾಸ್‌ಗಳಲ್ಲಿ
ಟೊಮೆಟೊ ಸೂಪ್, ಕ್ರೀಮಿ ಪಾಸ್ತಾ ಸಾಸ್, ಸ್ಟ್ಯೂ ಸೇರಿದಂತೆ ವಿವಿಧ ಭಕ್ಷ್ಯಗಳಲ್ಲಿ ಒಡೆದ ಹಾಲಿನ ನೀರನ್ನು ಸೇರಿಸಬಹುದು. ಇದು ರುಚಿಯೊಂದಿಗೆ ಪೌಷ್ಟಿಕತೆಯನ್ನೂ ಹೆಚ್ಚಿಸುತ್ತದೆ.