FOOD | ಮೂಲಂಗಿ ವಾಸನೆ ಅಂತ ಮೂಗು ಮುಚ್ಕೊಳ್ಬೇಡಿ! ಇದರ ಪರಾಠ ಒಮ್ಮೆ ಮಾಡಿ ನೋಡಿ

ಬೆಳಗಿನ ಉಪಹಾರಕ್ಕೆ ಏನು ಮಾಡಬೇಕು ಅನ್ನೋ ಪ್ರಶ್ನೆ ಖಂಡಿತ ಎಲ್ಲಾ ಮಹಿಳೆಯರಿಗೂ ಇರುತ್ತೆ. ಇಂತಹ ಸಂದರ್ಭಗಳಲ್ಲಿ ಪೌಷ್ಟಿಕಾಂಶ ತುಂಬಿದ, ರುಚಿಯಾಗಿರುವ ಮೂಲಂಗಿ ಪರಾಠ ಅತ್ಯುತ್ತಮ ಆಯ್ಕೆ.

ಬೇಕಾಗುವ ಪದಾರ್ಥಗಳು:

1 ಕಪ್ ಗೋಧಿ ಹಿಟ್ಟು
1/2 ಕಪ್ ತುರಿದ ಬಿಳಿ ಮೂಲಂಗಿ
1/4 ಕಪ್ ಸಣ್ಣಗೆ ಹೆಚ್ಚಿದ ಮೂಲಂಗಿ ಎಲೆಗಳು
2 ಟೀ ಚಮಚ ಮೊಸರು
1/2 ಟೀಸ್ಪೂನ್ ಕೊತ್ತಂಬರಿ ಪುಡಿ
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1/2 ಟೀಸ್ಪೂನ್ ಅರಿಶಿನ ಪುಡಿ
2 ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
1 ಚಮಚ ಎಣ್ಣೆ
ಉಪ್ಪು

ಮಾಡುವ ವಿಧಾನ:

ಒಂದು ದೊಡ್ಡ ಬಟ್ಟಲಿನಲ್ಲಿ ಗೋಧಿ ಹಿಟ್ಟು, ಎಣ್ಣೆ, ಉಪ್ಪು, ತುರಿದ ಮೂಲಂಗಿ, ಕತ್ತರಿಸಿದ ಮೂಲಂಗಿ ಎಲೆಗಳು, ಮೊಸರು, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಕೊತ್ತಂಬರಿ ಪುಡಿ ಹಾಕಿ ಅವುಗಳನ್ನು ಸರಿಯಾಗಿ ಮಿಶ್ರಣ ಮಾಡಿ. ಹಿಟ್ಟನ್ನು ಬೆರೆಸಲು ಅಗತ್ಯವಿರುವಷ್ಟು ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಹಿಟ್ಟನ್ನು ತಟ್ಟೆಯಿಂದ ಮುಚ್ಚಿ 15 ನಿಮಿಷಗಳ ಕಾಲ ಬಿಡಿ.

ನಂತರ ಹಿಟ್ಟನ್ನು ಉಂಡೆಗಳಾಗಿ ಮಾಡಿ ಚಪಾತಿಯಂತೆ ಲಟ್ಟಿಸಿ ತವಾದ ಮೇಲೆ ಹಾಕಿ ಎರಡು ಬದಿ ಚನ್ನಾಗಿ ಬೇಯಿಸಿಕೊಂಡರೆ ಮೂಲಂಗಿ ಪರಾಠ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!