ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವೆ ಸ್ಮೃತಿ ಇರಾನಿ ವಿರುದ್ಧ ಯಾವುದೇ ಅವಹೇಳನಕಾರಿ ಪದಗಳನ್ನು ಬಳಸದಂತೆ ತಮ್ಮ ಬೆಂಬಲಿಗರು ಮತ್ತು ಇತರರರಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ , ಜನರನ್ನು ಅವಮಾನಿಸುವುದು ದೌರ್ಬಲ್ಯದ ಸಂಕೇತ, ಶಕ್ತಿಯಲ್ಲ ಎಂದು ಹೇಳಿದ್ದರು. ಸ್ಮೃತಿ ಇರಾನಿ ಲೋಕಸಭೆ ಚುನಾವಣೆಯಲ್ಲಿ ಅಮೇಠಿಯಲ್ಲಿ ಸೋತಿದ್ದರು.
ಜೀವನದಲ್ಲಿ ಸೋಲು-ಗೆಲುವು ಸಂಭವಿಸುತ್ತವೆ. ಶ್ರೀಮತಿ ಸ್ಮೃತಿ ಇರಾನಿ ಬಗ್ಗೆ ಅಥವಾ ಇತರ ಯಾವುದೇ ನಾಯಕರ ಬಗ್ಗೆ ಅವಹೇಳನಕಾರಿ ಭಾಷೆ ಬಳಸಬೇಡಿ ಎಂದು ನಾನು ವಿನಂತಿಸುತ್ತೇನೆ.ಅವಮಾನಿಸುವುದು ದೌರ್ಬಲ್ಯದ ಸಂಕೇತವೇ ಹೊರತು ಶಕ್ತಿಯಲ್ಲ” ಎಂದು ರಾಹುಲ್ ಎಕ್ಸ್ ನಲ್ಲಿ ಬರೆದಿದ್ದಾರೆ. ಅಂದಹಾಗೆ ರಾಹುಲ್ ಗಾಂಧಿ ಮನವಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.